ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡುವಾಗ ವಿಶೇಷ ಗಮನ ನೀಡಬೇಕಾಗುತ್ತದೆ.
ಯಾವುದೇ ಹೊಸ ಫೋಟೋ ಅಥವಾ ಮೂರ್ತಿಯನ್ನಿಡುವಾಗ ಕೂಡ ದಿಕ್ಕು, ನಿಯಮವನ್ನು ಪಾಲನೆ ಮಾಡಬೇಕು. ಇಲ್ಲವಾದ್ರೆ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಶಿವನ ಮೂರ್ತಿಯನ್ನು ಸ್ಥಾಪನೆ ಮಾಡಿ.
ಭಗವಂತ ಶಿವನ ಮೂರ್ತಿಯನ್ನು ಉತ್ತರ ದಿಕ್ಕಿಗೆ ಇಡಿ. ಕೈಲಾಸ ಪರ್ವತ ಉತ್ತರ ದಿಕ್ಕಿಗಿರುವ ಕಾರಣ, ಮನೆಯಲ್ಲಿ ಈಶ್ವರನ ಮೂರ್ತಿಯನ್ನು ಉತ್ತರ ದಿಕ್ಕಿಗೆ ಇಡಬೇಕು.
ಖುಷಿಯಲ್ಲಿರುವ, ಸಂತೋಷದಲ್ಲಿರುವ ಈಶ್ವರನ ಫೋಟೋ ಅಥವಾ ಮೂರ್ತಿಯನ್ನು ಮನೆಯಲ್ಲಿಡಿ. ನಂದಿ ಮೇಲೆ ಕುಳಿತಿರುವ ಈಶ್ವರನ ಮೂರ್ತಿ ಒಳ್ಳೆಯದು. ನಿಂತಿರುವ ಶಿವನ ಮೂರ್ತಿಯನ್ನು ಎಂದೂ ಇಡಬೇಡಿ. ಕುಟುಂಬ ಸಮೇತವಾಗಿರುವ ಶಿವನ ಮೂರ್ತಿ ಬಹಳ ಒಳ್ಳೆಯದು.