
ಸೌಂದರ್ಯ ವೃದ್ಧಿಗೆ ಮಹಿಳೆಯರು ಏನೆಲ್ಲ ಕಸರತ್ತು ಮಾಡ್ತಾರೆ. ಮೇಕಪ್ ಜೊತೆಗೆ ತುಟಿಯ ರಂಗನ್ನು ಹೆಚ್ಚಿಸಿಕೊಳ್ಳಲು ಲಿಪ್ ಸ್ಟಿಕ್ ಬಳಸ್ತಾರೆ. ಇನ್ನು ಮುಂದೆ ತುಟಿ ಸುಂದರವಾಗಿ ಕಾಣಲೆಂದು ಸಿಕ್ಕಾಪಟ್ಟೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುವಾಗ ಎಚ್ಚರವಿರಲಿ.
ಅಧ್ಯಯನವೊಂದರ ಪ್ರಕಾರ, ಲಿಪ್ ಸ್ಟಿಕ್ ಬಳಸುವ ಮಹಿಳೆಯರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರಂತೆ. ಇದರ ಪ್ರಕಾರ ಲಿಪ್ ಸ್ಟಿಕ್, ಮೆದುಳು, ನಡವಳಿಕೆ ಹಾಗೂ ಕಲಿಕೆ ಮೇಲೆ ಪರಿಣಾಮ ಬೀರಲಿದೆಯಂತೆ.
ಲಿಪ್ ಸ್ಟಿಕ್ ಕಂಪನಿಗಳು ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಪದಾರ್ಥವನ್ನು ಲಿಪ್ ಸ್ಟಿಕ್ ಜೊತೆ ಬೆರೆಸುತ್ತಿವೆ. ಅಧ್ಯಯನದ ಪ್ರಕಾರ ಲಿಪ್ ಸ್ಟಿಕ್ ನಲ್ಲಿರುವ ಸ್ವಲ್ಪ ಪ್ರಮಾಣದ ವಿಷಯುಕ್ತ ಅಂಶ ದೇಹ ಸೇರಿದ್ರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆಯಂತೆ.