MRI ಎಂದರೆ ʼಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಸ್ಕ್ಯಾನ್ʼ. ಈ ವಿಧಾನ ಸಾಮಾನ್ಯವಾಗಿ 15 ರಿಂದ 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ದೇಹದ ಯಾವ ಭಾಗವನ್ನು ಸ್ಕ್ಯಾನ್ ಮಾಡಬೇಕು, ಎಷ್ಟು ಫೋಟೋಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಬಹಳ ಮುಖ್ಯ.
ಇದು ಕಾಂತಕ್ಷೇತ್ರದಿಂದ(ಮ್ಯಾಗ್ನೆಟಿಕ್ ಫೀಲ್ಡ್) ಕಾರ್ಯ ನಿರ್ವಹಿಸುತ್ತದೆ. ಮೆದುಳು, ಮೊಣಕಾಲು, ಬೆನ್ನುಹುರಿಯಂತಹ ದೇಹದ ವಿವಿಧ ಭಾಗಗಳ MRI ಸ್ಕ್ಯಾನ್ ಮಾಡಿ ಯಾವ ಭಾಗದಲ್ಲಿ ತೊಂದರೆ ಇದೆ ಎಂಬುದನ್ನ ತಿಳಿದುಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ MRI ಸ್ಕ್ಯಾನ್ ದಿನದಂದು ಕೆಲವು ಸಂದರ್ಭಗಳಲ್ಲಿ ಸ್ಕ್ಯಾನ್‌ಗೆ ಕೇವಲ ನಾಲ್ಕು ಗಂಟೆಗಳ ಮೊದಲು ಆಹಾರ ಸೇವಿಸಲು ಹೇಳಲಾಗುತ್ತದೆ. ಸಾಕಷ್ಟು ನೀರು ಕುಡಿದು ಹೋದ್ರೆ ಒಳ್ಳೇದು.
ಸ್ಕ್ಯಾನಿಂಗ್ ಮಾಡಿಸಲು ಹೋಗುವಾಗ ಯಾವುದೇ ಹೇರ್ ಪಿನ್, ಉಂಗುರ, ಲೋಹದ ಬಳೆ ಮುಂತಾದ ಲೋಹದ ವಸ್ತುಗಳನ್ನು ಧರಿಸಬೇಡಿ. MRI ಸ್ಕ್ಯಾನರ್ ಶಕ್ತಿಯುತ ಕಾಂತಕ್ಷೇತ್ರವನ್ನು ಹೊಂದಿರುತ್ತದೆ. ಇವು ಅಪಾಯಕ್ಕೆ ದಾರಿ ಮಾಡಿಕೊಡುತ್ತವೆ.