alex Certify ಸೀರೆ ಧರಿಸಿದಾಗ ಆಕರ್ಷಕವಾಗಿ ಕಾಣಬೇಕೆಂದರೆ ತಿಳಿದಿರಲಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆ ಧರಿಸಿದಾಗ ಆಕರ್ಷಕವಾಗಿ ಕಾಣಬೇಕೆಂದರೆ ತಿಳಿದಿರಲಿ ಈ ಟಿಪ್ಸ್

ಹಲವು ರೀತಿಯ ಫ್ಯಾಶನ್ ಡ್ರೆಸ್ ಧರಿಸಿರುವ ಮಹಿಳೆಯರಿಗಿಂತ ಸೀರೆ ಉಟ್ಟ ಮಹಿಳೆಯರೇ ತುಂಬಾ ಅಂದವಾಗಿ ಆಕರ್ಷಕವಾಗಿ ಕಾಣುವುದು. ಹೆಣ್ಣಿಗೆ ಸೀರೆಯೇ ಅಂದ ಎನ್ನುವಂತೆ ಹೆಣ್ಣು, ಸೀರೆ ಧರಿಸಿದರೆ ಅವಳ ಚೆಂದ ನೋಡೋದೆ ಕಣ್ಣಿಗೆ ಹಬ್ಬ.

ಹೆಚ್ಚಾಗಿ ಮಹಿಳೆಯರು ವಿಶೇಷ ಸಮಾರಂಭಗಳಲ್ಲಿ ಸೀರೆಯನ್ನು ಧರಿಸುತ್ತಾರೆ. ಆದರೆ ಮಹಿಳೆಯರು ಸೀರೆಯಲ್ಲಿ ನೋಡಲು ಅಂದವಾಗಿ ಕಾಣಲು ಸೀರೆಯ ಬಣ್ಣ ಒಂದೇ ಮುಖ್ಯವಾಗುವುದಿಲ್ಲ. ಜೊತೆಗೆ ಸೀರೆ ಉಡುವ ರೀತಿ, ಚಪ್ಪಲಿ, ಲಂಗ, ಬ್ಲೌಸ್, ಆಭರಣ ಎಲ್ಲವೂ ಮುಖ್ಯವಾಗುತ್ತದೆ.

ಮಹಿಳೆಯರು ಬೇರೆ ಬೇರೆ ಸ್ಟೈಲ್ ನಲ್ಲಿ ಸೀರೆಗಳನ್ನು ಉಡಬಹುದು. ಆದರೆ ಯಾವ ಶೈಲಿಯಲ್ಲಿ ಉಟ್ಟರೆ ನೀವು ಆಕರ್ಷಕವಾಗಿ ಕಾಣುತ್ತಿರೋ ಅದೇ ಶೈಲಿಯಲ್ಲಿ ಸೀರೆ ಉಟ್ಟರೆ ಉತ್ತಮ. ಸೀರೆಯನ್ನು ಸೊಂಟಕ್ಕಿಂತ ತುಂಬಾ ಮೇಲೆ ಅಥವಾ ತುಂಬಾ ಕೆಳಗೆ ಉಡೋದು ಬೇಡ. ತೆಳ್ಳಗೆ-ಬೆಳ್ಳಗೆ ಇರುವವರು ಹೊಕ್ಕಳ ಕೆಳಗೆ ಸೀರೆ ಉಟ್ಟರೆ ತುಂಬಾ ಆಕರ್ಷಕವಾಗಿ ಕಾಣುತ್ತೀರಿ. ಆದರೆ ದಪ್ಪವಾಗಿರುವವರು ಮಾತ್ರ ಹೊಕ್ಕಳ ಕೆಳಗೆ ಸೀರೆ ಉಡಬೇಡಿ. ಯಾಕೆಂದರೆ ಇದರಿಂದ ನಿಮ್ಮ ಹೊಟ್ಟೆ ದೊಡ್ಡದಾಗಿ ಕಾಣುತ್ತದೆ.

ಹಾಗೇ ಸೀರೆಯ ಜೊತೆಗೆ ಒಳಗೆ ತೊಡುವ ಲಂಗದ ಬಣ್ಣ ಕೂಡ ಇಲ್ಲಿ ಮುಖ್ಯವಾಗುತ್ತದೆ. ನೀವು ಯಾವ ಬಣ್ಣದ ಸೀರೆ ಧರಿಸುತ್ತೀರೋ ಅದೇ ಬಣ್ಣದ ಒಳ ಲಂಗವನ್ನು ಧರಿಸಬೇಕು. ಒಂದು ವೇಳೆ ಬೇರೆ ಬಣ್ಣದ ಲಂಗವನ್ನು ಧರಿಸಿದರೆ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ಹಾಗೇ ಬ್ಲೌಸ್ ಒಳಗೆ ಧರಿಸುವ ಬ್ರಾ ಹೊರಗೆ ಕಾಣದ ಹಾಗೇ ನೋಡಿಕೊಳ್ಳಬೇಕು.

ಕೆಲ ಮಹಿಳೆಯರು ಸೀರೆ ಧರಿಸಿದಾಗ ದೊಡ್ಡ ಗಾತ್ರದ ಹ್ಯಾಂಡ್ ಬ್ಯಾಗ್ ನ್ನು ಹಿಡಿದು ಬರ್ತಾರೆ. ಇದರಿಂದ ಅವರು ನೋಡಲು ಸ್ಕೂಲ್ ಟೀಚರ್ ನಂತೆ ಕಾಣುತ್ತಾರೆ. ಹಾಗಾಗಿ ಪಾರ್ಟಿ, ಸಮಾರಂಭಗಳಿಗೆ ಹೋಗುವಾಗ ಸೀರೆ ಧರಿಸಿದರೆ ಚಿಕ್ಕದಾದ ಹ್ಯಾಂಡ್ ಬ್ಯಾಗ್ ಅಥವಾ ಸಣ್ಣ ಪರ್ಸ್ ನ್ನು ತೆಗೆದುಕೊಂಡು ಹೋದರೆ ನೋಡಲು ಆಕರ್ಷಕವಾಗಿರುತ್ತೆ.

ಹಾಗೇ ಸೀರೆಗೆ ಸರಿ ಹೊಂದುವ ಚಪ್ಪಲಿಯನ್ನು ಧರಿಸಿ. ಚಪ್ಪಲಿ ಕಲರ್ ಸೀರೆ ಕಲರ್ ಗೆ ಮ್ಯಾಚ್ ಆದರೆ ಇನ್ನೂ ಆಕರ್ಷವಾಗಿರುತ್ತದೆ. ಆದರೆ ಚಪ್ಪಲಿ ಕಾಣಬೇಕು ಅಂತ ಸೀರೆಯನ್ನು ಪಾದಕ್ಕಿಂತ ಮೇಲೆ ಬರುವ ಹಾಗೆ ಉಡಬೇಡಿ. ಸೀರೆ ಯಾವಾಗಲೂ ಪಾದಕ್ಕಿಂತ ಕೆಳಗೆ ಇರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...