alex Certify ಗರ್ಭಧರಿಸುವ ಮುನ್ನ ಈ ವಿಷಯಗಳನ್ನು ಅರಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಧರಿಸುವ ಮುನ್ನ ಈ ವಿಷಯಗಳನ್ನು ಅರಿಯಿರಿ

ಮನೆಯಲ್ಲಿ ಮಕ್ಕಳಿದ್ದರೆ ಚೆಂದ. ಅವರ ಆಟ, ಪಾಠ, ತೊದಲು ನುಡಿಗಳನ್ನು ಕೆಳಿ ಇಷ್ಟಪಡದವರು ಯಾರಿದ್ದಾರೆ? ಆದರೆ ಈಗಿನ ಜೀವನಶೈಲಿ, ಹಾಗೂ ಕೆಲವೊಂದು ಆಹಾರ ಪದ್ಧತಿಗಳಿಂದ ಗರ್ಭದಾರಣೆ ದೊಡ್ಡ ಸಮಸ್ಯೆಯಾಗಿದೆ.

ಕೆರಿಯರ್, ಆರ್ಥಿಕ ಪರಿಸ್ಥಿತಿ, ಜೀವನವನ್ನು ಎಂಜಾಯ್ ಮಾಡುವುದಕ್ಕೆ ಆಗಲ್ಲ ಹೀಗೆ ಇನ್ನಿತರ ಕಾರಣಗಳಿಂದ ಕೆಲವರು ಇವಾಗಲೇ ಮಕ್ಕಳು ಬೇಡ ಎನ್ನುತ್ತಾರೆ. ಆದರೆ ವರ್ಷವಾಗುತ್ತಾ ಹೋದಂತೆ ನಮ್ಮ ಹಾರ್ಮೋನುಗಳಲ್ಲಿಯೂ ವ್ಯತ್ಯಾಸವಾಗುತ್ತದೆ. ಇದರಿಂದ ಮಕ್ಕಳು ಆಗದೇ ಕೂಡ ಇರಬಹುದು. ಆದಷ್ಟು ಆರೋಗ್ಯಕರವಾದ ಅಭ್ಯಾಸಗಳನ್ನು ಅಳವಡಿಸಿಕೊಂಡು ನಾವು ಈ ಸಮ್ಯಸ್ಯೆಯನ್ನು ನಿವಾರಿಸಿಕೊಳ್ಳಬಹುದು.

* ಬಾಳೆಹಣ್ಣು, ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ದಿನಕ್ಕೆ ಒಂದಾದರೂ ತಿನ್ನುವ ಅಭ್ಯಾಸವಿಟ್ಟುಕೊಳ್ಳಿ.

*ಜಂಕ್ ಫುಡ್ ಗಳಿಂದ ದೂರವಿದ್ದು ಆದಷ್ಟು ಕಾಳುಗಳು, ಧಾನ್ಯಗಳನ್ನು ಬಳಸಿದ ಅಡುಗೆಗೆ ಆದ್ಯತೆ ನೀಡಿ.

ಇದರ ಜತೆಗೆ ವಾಕಿಂಗ್, ವ್ಯಾಯಾಮದಿಂದ ಕೂಡ ಉತ್ತಮವಾದ ಆರೋಗ್ಯ ಪಡೆಯಬಹುದು.

ನೀರು ಹೆಚ್ಚಾಗಿ ಕುಡಿಯಿರಿ. ಆದಷ್ಟು ಸಕಾರಾತ್ಮಕ ಯೋಚನೆಗಳಿಗೆ ಮನಸ್ಸಿನಲ್ಲಿ ಅವಕಾಶ ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...