
ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಮನಿ ಪ್ಲಾಂಟ್ ಇಡುವುದು ಫ್ಯಾಷನ್ ಆಗಿದೆ. ಮನೆ ಸೌಂದರ್ಯ ಹೆಚ್ಚಿಸಲು ಅನೇಕರು ಮನೆ ಬಳಿ ಮನಿ ಪ್ಲಾಂಟ್ ಬೆಳೆಸುತ್ತಾರೆ. ಆದ್ರೆ ಮನೆ ಮುಂದೆ ಮನಿ ಪ್ಲಾಂಟ್ ಇಡುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ.
ಮನಿ ಪ್ಲಾಂಟ್ ಬೇರೆಯವರ ಕಣ್ಣಿಗೆ ಬೀಳದಂತೆ ಇಡಬೇಕು. ಮನೆ ಬಾಗಿಲು ಅಥವಾ ಮುಖ್ಯ ಗೇಟ್ ಬಳಿ ಇದನ್ನು ಇಡಬಾರದು. ಮನೆಯೊಳಗೂ ಸಹ ಜನರು ಓಡಾಡದ ಸ್ಥಳದಲ್ಲಿ ಇಡಬೇಕು. ಮನಿ ಪ್ಲಾಂಟ್ ಬೇಗ ದೃಷ್ಟಿ ದೋಷಕ್ಕೊಳಗಾಗುತ್ತದೆ. ಹಾಗಾಗಿ ಅದನ್ನು ರಕ್ಷಿಸಬೇಕಾಗುತ್ತದೆ.
ಮರೆತೂ ಮನಿ ಪ್ಲಾಂಟನ್ನು ಈಶಾನ್ಯ ಸ್ಥಳದಲ್ಲಿ ಇಡಬೇಡಿ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬಸ್ಥರು ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿದೆ.
ಹಾಳಾಗಿರುವ, ಒಣಗಿರುವ ಮನಿ ಪ್ಲಾಂಟ್ ಮನೆಯಲ್ಲಿ ಇಡಬೇಡಿ. ಇದು ಆರ್ಥಿಕ ನಷ್ಟದ ಸಂಕೇತವಾಗಿದೆ. ಹಾಗೆ ಮನಿ ಪ್ಲಾಂಟ್ ನೆಲಕ್ಕೆ ತಾಗದಂತೆ ನೋಡಿಕೊಳ್ಳಿ. ಇದು ಮನೆ ಒತ್ತಡಕ್ಕೆ ಕಾರಣವಾಗುತ್ತದೆ.
ಮನಿ ಪ್ಲಾಂಟ್ ಗೆ ಹಾಕಿರುವ ನೀರನ್ನು ವಾರದಲ್ಲಿ ಒಂದು ದಿನ ಬದಲಿಸಿ. ಇದನ್ನು ದಕ್ಷಿಣ-ಪೂರ್ವ ದಿಕ್ಕಿಗೆ ಇಡಬೇಕು. ಇದು ಮನೆಯ ಸಮೃದ್ಧಿಗೆ ನೆರವಾಗುತ್ತದೆ. ಮನೆಯ ಆರ್ಥಿಕ ಸಂಕಷ್ಟ ದೂರವಾಗಿ ಧನಲಾಭವಾಗುತ್ತದೆ.