ಹಿಂದೂ ಧರ್ಮದಲ್ಲಿ ದೇವರ ಪೂಜೆ, ಆರಾಧನೆಗೆ ಮಹತ್ವದ ಸ್ಥಾನವಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ.
ಹಬ್ಬಗಳಲ್ಲಿ, ಹೊಸ ಕೆಲಸದ ಆರಂಭದಲ್ಲಿ ದೇವರ ಪೂಜೆಯನ್ನು ಅವಶ್ಯವಾಗಿ ಮಾಡಲಾಗುತ್ತದೆ. ಪೂಜೆ ಮಾಡುವ ಮೊದಲು ಸರಿಯಾದ ವಿಧಿ-ವಿಧಾನ ತಿಳಿದುಕೊಂಡರೆ ಪೂಜೆ ಫಲಿಸುತ್ತದೆ. ಲಕ್ಷ್ಮಿ ಒಲಿಯುತ್ತಾಳೆ.
ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪೂಜಾ ಸ್ಥಳವಿರಲಿ. ದೇವರ ಮನೆ ಕಟ್ಟಿಗೆಯಿಂದ ಮಾಡಿದ್ದಾಗಿರಲಿ. ದೇವರ ಮನೆಯಲ್ಲಿ ಕೊಳಕು ಇರದಂತೆ ನೋಡಿಕೊಳ್ಳಿ.
ದೇವರ ಮನೆಗೆ ಕಡು ಹಳದಿ ಅಥವಾ ಕಿತ್ತಳೆ ಬಣ್ಣವನ್ನು ಹಚ್ಚಿ. ದೇವರ ಮನೆಯಲ್ಲಿ ಕಡು ನೀಲಿ ಬಣ್ಣದ ಬೆಳಕಿರಲಿ.
ದೇವರ ಮನೆಯಲ್ಲಿ ಹಳದಿ ಅಥವಾ ಕೆಂಪು ಬಣ್ಣದ ವಸ್ತ್ರವಿರಲಿ. ಗಣಪತಿ ಹಾಗೂ ಲಕ್ಷ್ಮಿಯ ಮೂರ್ತಿ ದೇವರ ಮನೆಯಲ್ಲಿರಲಿ. ಮನೆಯಲ್ಲಿ ಗುರುವಿನ ಚಿತ್ರವನ್ನಿಡಿ. ತಾಮ್ರದ ಲೋಟದಲ್ಲಿ ಗಂಗಾಜಲವನ್ನಿಡಿ.
ಸದಾ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಹಾಕಿ ದೇವರ ಪ್ರಾರ್ಥನೆ, ಭಜನೆ ಮಾಡಿ. ಬೇರೆ ದಿಕ್ಕಿನಲ್ಲಿ ಕುಳಿತು ಮಾಡಿದ ಭಜನೆ, ಪ್ರಾರ್ಥನೆ ಫಲ ನೀಡುವುದಿಲ್ಲ. ಭಜನೆ ಮಾಡುವ ವೇಳೆ ಅನ್ಯ ಮಾತುಗಳಿಗೆ ಗಮನ ನೀಡಬೇಡಿ. ಮನಸ್ಸನ್ನು ಏಕಾಗ್ರತೆಯಲ್ಲಿಟ್ಟುಕೊಳ್ಳಿ.
ಶುದ್ಧ, ಸ್ವಚ್ಛ ಬಟ್ಟೆಯನ್ನು ಧರಿಸಿ ದೇವರ ಪೂಜೆ ಮಾಡಿ. ದೇವರಿಗೆ ಶುದ್ಧ ಮಿಠಾಯಿ ಅಥವಾ ತಾಜಾ ಹಣ್ಣನ್ನು ಅರ್ಪಿಸಿ.
ಕೆಂಪು ಅಥವಾ ಹಳದಿ ಆಸನದ ಮೇಲೆ ಕುಳಿತು ತಿಳಿ ಹಳದಿ ಅಥವಾ ಗುಲಾಬಿ ಬಣ್ಣದ ಬಟ್ಟೆ ಧರಿಸಿ ದೇವರ ಧ್ಯಾನ ಮಾಡಿ.