ಹಲ್ಲು ಉಜ್ಜುವ ವಿಧಾನವನ್ನು ತಿಳಿಸಿಕೊಡುವ ಹತ್ತಾರು ಜಾಹೀರಾತುಗಳನ್ನು ಗಮನಿಸಿದ ಬಳಿಕವೂ ನೀವು ಹಲ್ಲುಜ್ಜುವ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿಲ್ಲವೇ. ಹಳೆ ತಪ್ಪನ್ನು ಸರಿಪಡಿಸಿ, ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವ ವಿಧಾನ ಇಲ್ಲಿದೆ ಕೇಳಿ.
ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಹುಳುಕು ಹೆಚ್ಚುತ್ತದೆ. ಬ್ಯಾಕ್ಟೀರಿಯಾಗಳು ಅಲ್ಲೇ ಶೇಖರಣೆಗೊಂಡು ಹಲ್ಲನ್ನು ಹಾಳು ಮಾಡುತ್ತವೆ. ಹಾಗಾಗಿ ಸರಿಯಾಗಿ ಹಲ್ಲುಜ್ಜುವುದು ಬಹಳ ಮುಖ್ಯ.
ನಿಂಬೆ ರಸಕ್ಕೆ ಉಪ್ಪು ಬೆರೆಸಿ ಬ್ರಶ್ ಗೆ ಹಾಕಿ ಹಲ್ಲುಜ್ಜಿ. ಬಾಳೆ ಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜುವುದರಿಂದಲೂ ಬಾಯಿಯ ಕೊಳೆ ದೂರಮಾಡಬಹುದು. ಇದರಿಂದ ಬ್ರಶ್ ಮಾಡಿದ ಬಳಿಕ ಮಾಮೂಲಿ ಪೇಸ್ಟ್ ನಿಂದ ಹಲ್ಲುಜ್ಜಿ.
ಹಲ್ಲುಗಳನ್ನು ಮುಂಭಾಗದಲ್ಲಿ ಮಾತ್ರವಲ್ಲ, ಹಿಂಬದಿಯಿಂದ, ಒಳಭಾಗದಿಂದಲೂ ಕ್ಲೀನ್ ಮಾಡಿ. ಆಗ ಹಲ್ಲುಗಳು ಆರೋಗ್ಯಯುತವಾಗಿರುತ್ತವೆ. ಬ್ರಶ್ ನ ಹಿಂಭಾಗದಿಂದ ನಾಲಗೆಯ ಮೇಲ್ಬಾಗವನ್ನು ಸ್ವಚ್ಛಗೊಳಿಸಿ. ಉಪ್ಪು ನೀರು ಬೆರೆಸಿ ಆಗಾಗ ಬಾಯಿ ತೊಳೆಯುತ್ತಿರಿ.