ನವಜಾತ ಶಿಶುಗಳ ಚರ್ಮ ಸೂಕ್ಷ್ಮವಾಗಿರುವ ಕಾರಣ ಅವರ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅವರು ಚರ್ಮದ ಸೋಂಕಿಗೆ ಒಳಗಾಗುತ್ತಾರೆ. ಹಾಗಾಗಿ ಬಹಳ ಹಿಂದಿನ ಕಾಲದಿಂದಲೂ ಮಗುವಿಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆಯಿಂದ ಮಸಾಜ್ ಮಾಡಿಸುತ್ತಾರೆ. ಆದರೆ ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ ಮಗುವಿಗೆ ಏನು ಲಾಭ ಎಂಬುದನ್ನು ತಿಳಿದು ಎಣ್ಣೆಯನ್ನು ಬಳಸಿ.
ಸಾಸಿವೆ ಎಣ್ಣೆ : ಕೆಲವರು ಮಕ್ಕಳಗೆ ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಇದು ಬೆಚ್ಚಗಿನ ಗುಣವನ್ನು ಹೊಂದಿರುವ ಕಾರಣ ಇದು ಮಗುವಿನ ದೇಹವನ್ನು ಬೆಚ್ಚಗಿಡುತ್ತದೆ ಮತ್ತು ಶೀತ ಕಫದ ಸಮಸ್ಯೆ ಬರದಂತೆ ತಡೆಯುತ್ತದೆ. ಅಲ್ಲದೇ ಇದು ಮೂಳೆಗಳು ಹಾಗೂ ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಮಗುವಿಗೆ ಮೈಕೈ ನೋವಿನ ಸಮಸ್ಯೆ ಕಾಡುವುದಿಲ್ಲ.
ತೆಂಗಿನೆಣ್ಣೆ : ಈ ಎಣ್ಣೆಯು ಹಗುರವಾಗಿರುವ ಕಾರಣ ಇದನ್ನು ಚರ್ಮ ಸುಲಭವಾಗಿ ಹೀರಿಕೊಳ್ಳಬಹುದು. ಇದರಿಂದ ತ್ವಚೆ ತೇವಾಂಶದಿಂದ ಕೂಡಿರುತ್ತದೆ. ಹಾಗೇ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಚರ್ಮದ ಸೋಂಕಿನಿಂದ ಕಾಪಾಡುತ್ತದೆ. ಇದು ದೇಹವನ್ನು ತಂಪಾಗಿಡುತ್ತದೆ.
ಬಾದಾಮಿ ಆಯಿಲ್ : ಇದು ತಂಪಾದ ಗುಣವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಇದನ್ನು ಮಗುವಿನ ದೇಹಕ್ಕೆ ಮಸಾಜ್ ಮಾಡುವುದರಿಂದ ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ. ಇದರಿಂದ ಮಗು ಚೆನ್ನಾಗಿ ನಿದ್ರಿಸುತ್ತದೆ ಮತ್ತು ಚರ್ಮದ ಹೊಳಪು ಹೆಚ್ಚಾಗುತ್ತದೆ.