ಇದು ಚರ್ಮಕ್ಕೆ ಆಳವಾದ ಜಲಸಂಚಯನವನ್ನು ನೀಡುತ್ತವೆ, ಇದು ಒಣತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಇದು ಒಣತ್ವಜೆಯ ಸಮಸ್ಯೆ ಇರುವವರಿಗೆ ಸೂಕ್ತ. ಹಾಗೇ ಇದು ಚರ್ಮವನ್ನು ಹೆಚ್ಚು ಕಾಂತಿಯುತ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮ ಹೆಚ್ಚು ಯೌವನದಿಂದ ಕಾಣವಂತೆ ಮಾಡುತ್ತದೆ. ಚರ್ಮದ ಕಾಳಜಿ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಈ ಚಿಕಿತ್ಸೆಯನ್ನು ಪಡೆಯಬಹುದು.
ಸ್ಕಿನ್ ಬುಸ್ಟರ್ ಇಂಜೆಕ್ಷನ್ಗಳ ಅಡ್ಡಪರಿಣಾಮಗಳು :
ಇದು ಚರ್ಮ ಕೆಂಪಾಗುವಿಕೆ ಅಥವಾ ಊತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಇದು ಚರ್ಮದ ಜೊತೆ ಪ್ರತಿಕ್ರಿಯಿಸಿ ಅಲರ್ಜಿಯನ್ನು ಉಂಟುಮಾಡಬಹುದು. ಹಾಗಾಗಿ ಇದರ ಪರಿಣಾಮ ಸಾಮಾನ್ಯವಾಗಿ 6-12 ತಿಂಗಳುಗಳವರೆಗೆ ಇರುವುದರಿಂದ ನಿರಂತರವಾಗಿ ಚರ್ಮದ ನಿರ್ವಹಣೆಯ ಅಗತ್ಯವಿರುತ್ತದೆ.
ಈ ಇಂಜೆಕ್ಷನ್ಗಳು ಹೈಲುರೊನಿಕ್ ಆಮ್ಲ ಮತ್ತು ಇತರ ಹೈಡ್ರೇಟಿಂಗ್ ಪದಾರ್ಥಗಳನ್ನು ಹೊಂದಿರುತ್ತವೆ, ಅವುಗಳನ್ನು ನೇರವಾಗಿ ಚರ್ಮದ ಆಳವಾದ ಪದರಗಳಿಗೆ ತಲುಪಿಸಲಾಗುತ್ತದೆ. ಈ ಇಂಜೆಕ್ಷನ್ ಸ್ನಾಯುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಮುಖದ ರಚನೆಯನ್ನು ಬದಲಾಯಿಸುವುದಿಲ್ಲ. ಆದರೆ ಇದು ಸೂರ್ಯನ ಕಿರಣಗಳಿಂದ ಚರ್ಮಕ್ಕೆ ರಕ್ಷಣೆ ನೀಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಈ ಇಂಜೆಕ್ಷನ್ ಚರ್ಮದ ಆರ್ದ್ರತೆ, ವಿನ್ಯಾಸ ಮತ್ತು ನೋಟವನ್ನು ಸುಧಾರಿಸಲು ಗಮನಾರ್ಹ ಪ್ರಯೋಜನಗಳನ್ನು ನೀಡಬಹುದು. ಆದರೆ, ಚಿಕಿತ್ಸೆಗೆ ಒಳಗಾಗುವ ಮೊದಲು ಅದರ ಅನುಕೂಲಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಗಮನಹರಿಸಬೇಕು. ಮತ್ತು ಈ ಚಿಕಿತ್ಸೆ ಪಡೆಯುವ ಮುನ್ನ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಉತ್ತಮ ಎನ್ನಲಾಗಿದೆ.