ಯೋಗಾಸನ ಆರೋಗ್ಯದ ಮೂಲಮಂತ್ರಗಳಲ್ಲೊಂದು. ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಹಲವು ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು. ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೂ ದೈಹಿಕವಾಗಿ ಸದೃಢವಾಗಿರಲು ನಿತ್ಯ ಯೋಗವನ್ನು ಮಾಡಬೇಕು. ಎಲ್ಲರಿಗೂ ತಿಳಿದಿರುವಂತೆ ಇಂದು ಅಂತಾರಾಷ್ಟ್ರೀಯ ಯೋಗ ದಿನ. ಈ ವಿಶೇಷ ಸಂದರ್ಭದಲ್ಲಿ ಯೋಗ ಮಾಡುವುದರಿಂದ ನಿಮಗಾಗುವ ಐದು ಪ್ರಮುಖ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಮನಸ್ಸು ಶಾಂತವಾಗಿರುತ್ತದೆ: ಪ್ರತಿದಿನ ಯೋಗ ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ನೀವು ಮಾನಸಿಕವಾಗಿ ಸಂಪೂರ್ಣವಾಗಿ ಆರೋಗ್ಯವಾಗಿರಬಹುದು. ಯೋಗಾಭ್ಯಾಸವು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಹಾಗಾಗಿ ದೇಹದ ಜೊತೆಗೆ ಮನಸ್ಸಿಗೂ ಆರಾಮ ಸಿಗುತ್ತದೆ. ಜಿಮ್ ಅಥವಾ ವ್ಯಾಯಾಮ ಮಾಡುವ ಮೂಲಕ ನೀವು ದೈಹಿಕವಾಗಿ ಸದೃಢವಾಗಿರಬಹುದು. ಆದರೆ ಯೋಗ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ.
ರೋಗಗಳ ವಿರುದ್ಧ ಹೋರಾಡುವ ಶಕ್ತಿ: ಯೋಗಾಸನವನ್ನು ನಿಯಮಿತವಾಗಿ ಮಾಡುವುದರಿಂದ ಅನೇಕ ಮಾರಕ ರೋಗಗಳ ವಿರುದ್ಧ ಹೋರಾಡಬಹುದು. ಯೋಗ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕಾಯಿಲೆಗಳ ವಿರುದ್ಧ ಹೋರಾಡಲು ನಿಮ್ಮಲ್ಲಿ ಸಾಮರ್ಥ್ಯ ತುಂಬುತ್ತದೆ. ಹಾಗಾಗಿ ಪ್ರತಿದಿನ ಯೋಗಾಸನ ಮಾಡುವ ಅಭ್ಯಾಸವಿಟ್ಟುಕೊಳ್ಳಿ.
ಸಕ್ರಿಯವಾಗಿರಲು ಸಹಕಾರಿ : ಯೋಗ ಮಾಡುವುದರಿಂದ ನೀವು ಉಲ್ಲಾಸವನ್ನು ಅನುಭವಿಸುತ್ತೀರಿ. ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಸೋಮಾರಿತನವೂ ದೂರವಾಗುತ್ತದೆ. ಹಾಗಾಗಿ ಯೋಗಾಸನವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮಾತ್ರ ದಿನವಿಡೀ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.
ದೇಹದ ಹೊಂದಾಣಿಕೆ : ಯೋಗ ಮಾಡುವುದರಿಂದ ದೇಹವು ಹೊಂದಿಕೊಳ್ಳುತ್ತದೆ. ಯೋಗಾಸನದ ಬಳಿಕ ನಿಮಗೆ ದೇಹ ಹಗುರವೆನಿಸಬಹುದು. ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಮ್ಮ ದೇಹವು ಫಿಟ್ ಆಗಿರಲು ಇದೇ ಕಾರಣ.
ಫಿಟ್ನೆಸ್ : ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ದೂರವಿರಲು ಬಯಸಿದರೆ ಯೋಗ ಮಾಡಬೇಕು. ಇದು ನಿಮ್ಮನ್ನು ದೈಹಿಕವಾಗಿಯೂ ಫಿಟ್ ಆಗಿರಿಸುತ್ತದೆ. ಇಂತಹ ಗಂಭೀರ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.