ಭಾರತೀಯರ ಅತಿ ಅಚ್ಚುಮೆಚ್ಚಿನ ಆಟ ಕ್ರಿಕೆಟ್. ತಮ್ಮ ಮಕ್ಕಳು ಕ್ರಿಕೆಟರ್ ಆಗ್ಬೇಕೆಂದು ಅನೇಕ ಪಾಲಕರು ಬಯಸ್ತಾರೆ. ಕ್ರಿಕೆಟ್ ಪ್ರಸಿದ್ಧಿ ಜೊತೆ ಹಣ ಗಳಿಸುವ ಆಟದಲ್ಲಿ ಒಂದು. ನೀವು ಮೈದಾನಕ್ಕಿಳಿದು ಬ್ಯಾಟ್ಸ್ಮೆನ್ ಅಥವಾ ಬೌಲರ್ ಆಗ್ಬೇಕೆಂದೇನೂ ಇಲ್ಲ. ಮೈದಾನಕ್ಕಿಳಿಯದೆ ಕ್ರಿಕೆಟ್ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು.
ಕ್ರಿಕೆಟ್ ಕ್ಷೇತ್ರದಲ್ಲಿ ಆಟಗಾರನ ಜೊತೆಗೆ ಅಂಪೈರ್, ನಿರೂಪಕ ಸೇರಿದಂತೆ ಅನೇಕ ಉದ್ಯೋಗವಿದೆ. ನಿರೂಪಕನಾಗಲು ನೀವು ಬಯಸಿದ್ರೆ ಅದಕ್ಕೆ ಏನು ಮಾಡ್ಬೇಕು ಗೊತ್ತಾ? ಕ್ರಿಕೆಟ್ ನಿರೂಪಕರಾಗಲು ನೀವು ಕೆಲವು ವಿಷಯಗಳ ಮೇಲೆ ಬಲವಾದ ಹಿಡಿತವನ್ನು ಹೊಂದಿರಬೇಕು. ಇಂಗ್ಲಿಷ್ ಮೇಲೆ ಹಿಡಿತ ಹೊಂದಿರಬೇಕು. ಇಂಗ್ಲಿಷ್ ಚೆನ್ನಾಗಿ ಮಾತನಾಡಬಲ್ಲವರಾಗಿರಬೇಕು. ಈಗ ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಯಲ್ಲಿ ಕಾಮೆಂಟ್ರಿ ಮಾಡಬಹುದು. ಆದ್ರೆ ಇಂಗ್ಲಿಷ್ ಗೊತ್ತಿದ್ದರೆ ದೊಡ್ಡ ವೇದಿಕೆ ನಿಮಗೆ ಸಿಗಲಿದೆ. ಇದ್ರ ಜೊತೆ ಸಂವಹನ ಕೌಶಲ್ಯ ಉತ್ತಮವಾಗಿರಬೇಕು. ಕ್ರಿಕೆಟ್ ಇತಿಹಾಸ ಮತ್ತು ನಿಯಮಗಳ ಬಗ್ಗೆ ತಿಳಿದಿರಬೇಕು.
ಯಾವುದೇ ಕೋರ್ಸ್ ಮಾಡದೆ ನಿರೂಪಕರ ಉದ್ಯೋಗ ಪಡೆಯಬಹುದು. ರೇಡಿಯೊ ಜಾಕಿ ಅಥವಾ ಆಂಕರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದರೆ ಹೆಚ್ಚು ಪ್ರಯೋಜನಕಾರಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್, ಎಂಸಿಯು ಭೋಪಾಲ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮುಂತಾದ ಸಂಸ್ಥೆಗಳು ಇಂತಹ ಕೋರ್ಸ್‌ಗಳನ್ನು ನಡೆಸುತ್ತವೆ.
ಮಾಜಿ ಕ್ರಿಕೆಟಿಗರಿಗೆ ಇದು ಸುಲಭ. ಕ್ರಿಕೆಟ್ ಬಗ್ಗೆ ಎಲ್ಲವನ್ನೂ ತಿಳಿದಿರುವ ಕಾರಣ ಅವರಿಗೆ ಕೆಲಸ ಸಿಗುವುದು ಸುಲಭವಾಗುತ್ತದೆ. ಕೆಲ ಚಾನೆಲ್ ಗಳು ಕ್ರಿಕೆಟ್ ನಿರೂಪಕರನ್ನು ನೇಮಕ ಮಾಡಿಕೊಳ್ಳುತ್ತವೆ. ಆರಂಭದಲ್ಲಿ 2-3 ಲಕ್ಷ ರೂಪಾಯಿ ಸಿಗುತ್ತದೆ. ಅನುಭವ ಹೆಚ್ಚಾದಾಗ 4-6 ಲಕ್ಷಗಳವರೆಗೆ ಸಂಬಳ ಸಿಗುತ್ತದೆ.