ವಾತಾವರಣ ಬದಲಾಗ್ತಿದ್ದಂತೆ ಆರೋಗ್ಯ, ಚರ್ಮ ಸಮಸ್ಯೆ ಎದುರಾಗುತ್ತದೆ. ಕಾಲು ಬಿರುಕು ಬಿಡಲು ಶುರುವಾಗುತ್ತದೆ. ಬಿರುಕು ಬಿಟ್ಟ ಕಾಲು ಸೌಂದರ್ಯ ಹಾಳು ಮಾಡುವುದು ಮಾತ್ರವಲ್ಲ ಕೆಲವರಿಗೆ ಇದ್ರಿಂದ ರಕ್ತ ಸೋರಲು ಶುರುವಾಗುತ್ತದೆ. ಕೆಲ ಮನೆ ಮದ್ದಿನ ಮೂಲಕ ಬಿರುಕು ಬಿಡುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಬಿರುಕು ಬಿಟ್ಟ ಕಾಲಿನ ಸಮಸ್ಯೆ ಕಡಿಮೆಯಾಗುತ್ತದೆ. ರಾತ್ರಿ ಮಲಗುವ ಮೊದಲು ತೆಂಗಿನ ಎಣ್ಣೆಯನ್ನು ಒಡೆದ ಜಾಗಕ್ಕೆ ಹಚ್ಚಬೇಕು. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದನ್ನು ಹಚ್ಚಬೇಕು. ಸ್ವಲ್ಪ ಮಸಾಜ್ ಮಾಡಿದ ನಂತ್ರ ಸಾಕ್ಸ್ ಧರಿಸಿ ಮಲಗಬೇಕು. ಬೆಳಿಗ್ಗೆ ಪಾದಗಳನ್ನು ನೀರಿನಿಂದ ತೊಳೆಯಿರಿ.
ಆಪಲ್ ವಿನೆಗರ್ ಕೂಡ ಒಡೆದ ಕಾಲಿಗೆ ಪರಿಹಾರ ನೀಡುತ್ತದೆ. ಆಪಲ್ ವಿನೆಗರ್ ಗೆ ನಿಂಬೆ ರಸವನ್ನು ಸೇರಿಸಿ ಹಚ್ಚಬೇಕು. ಇವೆರಡೂ ಉರಿಯೂತ ಮತ್ತು ಆಮ್ಲೀಯ ಅಂಶಗಳನ್ನು ಒಳಗೊಂಡಿರುತ್ತವೆ. ನೀರನ್ನು ಬಿಸಿ ಮಾಡಿ ಗ್ಯಾಸ್ ಬಂದ್ ಮಾಡಿ. ನಂತ್ರ ನೀರು ಸ್ವಲ್ಪ ತಣ್ಣಗಾಗಲು ಬಿಡಿ. ಅದಕ್ಕೆ ತುರಿದ ನಿಂಬೆ ಸಿಪ್ಪೆ ಹಾಗೂ ಆಪಲ್ ವಿನೆಗರ್ ಹಾಕಿ 15 ನಿಮಿಷ ಕಾಲನ್ನು ನೀರಿನಲ್ಲಿ ಇಡಿ. ನಂತ್ರ ಕಾಲನ್ನು ಸ್ವಚ್ಚಗೊಳಿಸಿ ಸತ್ತ ಚರ್ಮವನ್ನು ತೆಗೆದು ಅಲೋವೆರಾ ಜೆಲ್ ಹಚ್ಚಿ. ನಿಯಮಿತ ಬಳಕೆಯಿಂದ ಒಡೆದ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.