ಕೊರೊನಾ ವೈರಸ್ ಮನುಷ್ಯ ದೇಹವನ್ನು ಬಾಧಿಸಿದ್ರೆ ಈ ವೈರಸ್ ಮೊಬೈಲ್ ಅನ್ನು ಬಾಧಿಸುತ್ತಿದೆ. ಇದರ ಹೆಸರು ಸೋವಾ ಅಂತ. ಒಂದು ಬಾರಿ ಈ ವೈರಸ್ ಮೊಬೈಲ್ ಗೆ ಎಂಟ್ರಿಯಾದರೆ ಮುಗೀತು. ನಿಮ್ಮ ಮೊಬೈಲ್ ಡೇಟಾ, ಬ್ಯಾಂಕ್ ಡೀಟೇಲ್ಸ್ ಸೇರಿದಂತೆ ಎಲ್ಲವನ್ನು ತನ್ನ ವಶ ಮಾಡಿಕೊಳ್ಳುತ್ತಂತೆ.
ಹೌದು, ಸೋವಾ ಎಂಬ ವೈರಸ್ ಇದೀಗ ಮೊಬೈಲ್ ಗಳನ್ನು ಕಾಡುತ್ತಿದೆ. ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಮೊಬೈಲ್ ನಲ್ಲಿ ಇದು ಗ್ಯಾರಂಟಿ ಹೊಕ್ಕುತ್ತದೆಯಂತೆ. ಈ ಸಾಧ್ಯತೆ ಹೆಚ್ಚಿದೆ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ. ಹೆಚ್ಚು ಜನರು ಭೇಟಿ ನೀಡುವ ವೆಬ್ ಸೈಟ್ ಗಳು, ಟೋರೆಂಟ್ ವೆಬ್ಸೈಟ್ಗಳು, ಅಶ್ಲೀಲ ಚಿತ್ರ ವೀಕ್ಷಣಾ ವೆಬ್ತಾಣಗಳು, ವೆಬ್ಸೈಟ್ ಲಿಂಕ್ಗಳು ಹಾಗೂ ಸೈಬರ್ ಪ್ರಮೋಟರ್ಸ್ ಮೂಲಕ ವೈರಸ್ ಮೊಬೈಲ್ ಸೇರಲಿದೆ. ಅಶ್ಲೀಲ ಚಿತ್ರಗಳ ಯಾವುದೇ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದರೂ ಈ ವೈರಸ್ ಸೇರಲಿದೆ.
ಇನ್ನು ಒಮ್ಮೆ ಈ ವೈರಸ್ ಮೊಬೈಲ್ ಗೆ ಬಂದರೆ ಸಾಕುವ ಮೊಬೈಲ್ ಡಾಟಾ, ಬ್ಯಾಂಕ್ ಡೀಟೇಲ್ಸ್ ಎಲ್ಲವನ್ನು ಕದಿಯುತ್ತಂತೆ. ಅಷ್ಟೆ ಅಲ್ಲ ಈ ವೈರಸ್ ಮೊಬೈಲ್ ಗೆ ಲಗ್ಗೆ ಇಟ್ಟಿರೋದು ಕೂಡ ಗೊತ್ತಾಗೋದಿಲ್ಲವಂತೆ. ಹೀಗಾಗಿ ಯಾವುದೇ ಆಪ್ ಡೌನ್ ಲೋಡ್ ಮಾಡಬೇಕಾದರೆ ಆಪ್ ಸ್ಟೋರ್ ಗಳಿಂದಲೇ ಡೌನ್ ಲೋಡ್ ಮಾಡಬೇಕು ಎನ್ನುತ್ತಿದ್ದಾರೆ. ನಿಮ್ಮ ಮೊಬೈಲ್ ಯೂಸ್ ಮಾಡುವಾಗ ಅತಿಯಾಗಿ ಬಿಸಿಯಾದರೆ, ಅನಗತ್ಯ ಜಾಹಿರಾತು ಬಂದರೆ, ಡಾಟಾ ಬೇಗ ಖಾಲಿಯಾಗುತ್ತಿದ್ದರೆ ಈ ವೈರಸ್ ನಿಮ್ಮ ಮೊಬೈಲ್ ಗೆ ಬಂದಿದೆ ಅಂತ ಅರ್ಥ. ಹೀಗಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಈ ಲಕ್ಷಣಗಳು ಕಾಣಿಸ್ತಾ ಇದ್ದರೆ ಮೊಬೈಲ್ ರೀಸೆಟ್ ಮಾಡುವುದು ಒಳ್ಳೆಯದು. ಜೊತೆಗೆ ಸಾಫ್ಟ್ವೇರ್ ಅಪ್ಡೇಟ್ ಮಾಡೋದು ಒಳ್ಳೆಯದು.