ಭಾರತ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಬಹಳ ವಿಶಾಲವಾಗಿ ಹರಡಿದೆ. ಭಾರತದಲ್ಲಿ ಹಲವಾರು ಜನಪ್ರಿಯ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅದರಲ್ಲೂ ಭಾರತದ ಕನ್ಯಾಕುಮಾರಿಯಲ್ಲಿ ಮನಸ್ಸಿಗೆ ಮುದ ನೀಡುವಂತಹ ಸ್ಥಳಗಳಿವೆ. ಹಾಗಾಗಿ ಮನಸ್ಸಿಗೆ ಶಾಂತಿ ಬಯಸುವವರು ಒಮ್ಮೆ ಈ ಸ್ಥಳಗಳಿಗೆ ಭೇಟಿ ನೀಡಿ.
ವಿವೇಕಾನಂದ ಸ್ಮಾರಕ : ಕನ್ಯಾಕುಮಾರಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಇದು ಒಂದು. ಈ ಸ್ಥಳದಲ್ಲಿ ಸ್ವಾಮಿ ವಿವೇಕಾನಂದರು 1892ರಲ್ಲಿ 3 ದಿನಗಳ ಕಾಲ ಧ್ಯಾನಕ್ಕೆ ಕುಳಿತಿದ್ದರು ಎನ್ನಲಾಗಿದೆ. ಹಾಗಾಗಿ ಈ ಸ್ಥಳದಲ್ಲಿ ವಿವೇಕಾನಂದರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರಧಾನಿ ಮೋದಿಯವರೂ ಕೂಡ ಧ್ಯಾನ ಮಾಡಿದ್ದರು.
ತಿರುವಳ್ಳುವರ್ ಪ್ರತಿಮೆ : ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಸ್ಮಾರಕದ ಬಳಿ ತಿರುವಳ್ಳುವರ್ ಬೃಹತ್ ಪ್ರತಿಮೆ ಇದೆ. ತಿರುವಳ್ಳುವರ್ ಒಬ್ಬ ಪ್ರಮುಖ ತಮಿಳು ಕವಿ ಮತ್ತು ತತ್ವಜ್ಞಾನಿ. ಇವರ 133 ಅಡಿ ಎತ್ತರದ ಬೃಹತ್ ಪ್ರತಿಮೆಯು 38 ಅಡಿ ಎತ್ತರದ ಪೀಠದ ಮೇಲೆ ನಿಂತಿದೆ.
ಕನ್ಯಾಕುಮಾರಿ ಬೀಚ್ : ಈ ಕಡಲ ತೀರವು ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರ ಮೂರು ಸಮುದ್ರದ ಸಂಗಮವಾಗಿದೆ. ಇಲ್ಲಿ ಮೂರು ವಿಭಿನ್ನ ಬಣ್ಣಗಳಲ್ಲಿ ನೀರು ಕಂಡುಬರುತ್ತದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲು ಬಹಳ ಅದ್ಭುತವಾಗಿದೆ.
ತಿರುಪರ್ರಾಪು ಜಲಪಾತ: ಇದು ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ಜಲಪಾತವಾಗಿದೆ. ಇಲ್ಲಿ ನೀರು ಸುಮಾರು 50 ಅಡಿ ಎತ್ತರದಿಂದ ಬೀಳುತ್ತದೆ. ಆದರೆ ಇದು ಮಾನವ ನಿರ್ಮಿತ ಜಲಪಾತವಾಗಿದೆ. ಇಲ್ಲಿ ಜಲಪಾತದ ಕೆಳಗಿರುವ ಕೊಳದಲ್ಲಿ ಸ್ನಾನ ಮಾಡಬಹುದು ಮತ್ತು ದೋಣಿ ವಿಹಾರ ಮಾಡಬಹುದು.