ಅಫ್ಘಾನಿಸ್ತಾನ, ತಾಲಿಬಾನ್ ಕೈವಶವಾದ್ಮೇಲೆ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಬ್ಯಾಂಕ್ ಗಳು ಹಾಗೂ ಕರೆನ್ಸಿ ಬಗ್ಗೆ ಗೊಂದಲ ಶುರುವಾಗಿದೆ. ಒಂದು ಕಾಲದಲ್ಲಿ ಅಪಘಾನ್ ರೂಪಾಯಿ ಚಲಾವಣೆಯಲ್ಲಿತ್ತು. 1925 ರಲ್ಲಿ ದೇಶದಲ್ಲಿ ಹೊಸ ಕರೆನ್ಸಿ ಅಫ್ಘಾನಿಯನ್ನು ಪರಿಚಯಿಸಲಾಯ್ತು.
ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್, ಅಫ್ಘಾನಿಸ್ತಾನ ಬ್ಯಾಂಕ್, ಅಫ್ಘಾನಿಸ್ತಾನದ ಕರೆನ್ಸಿಯನ್ನು ಮುದ್ರಿಸುವ ಮತ್ತು ವಿತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದನ್ನು 1939 ರಲ್ಲಿ ಸ್ಥಾಪಿಸಲಾಯಿತು. ಪ್ರಧಾನ ಕಚೇರಿ ಕಾಬೂಲ್ ನಲ್ಲಿದೆ. ಈ ಬ್ಯಾಂಕ್ ದೇಶಾದ್ಯಂತ 46 ಶಾಖೆಗಳನ್ನು ಹೊಂದಿದೆ. ತಾಲಿಬಾನ್ ನಿಯಂತ್ರಣದಿಂದಾಗಿ ಈಗ ಬ್ಯಾಂಕಿನ ಮುಖ್ಯಸ್ಥರ ಹುದ್ದೆ ಖಾಲಿ ಇದೆ.
ಅಫ್ಘಾನಿಸ್ತಾನದಲ್ಲಿ ಒಂದು ಅಫ್ಘಾನಿಯಿಂದ 1000 ಅಫ್ಘನಿ ಕರೆನ್ಸಿ ಚಾಲ್ತಿಯಲ್ಲಿದೆ. ಅಫ್ಘಾನಿ ನೋಟು ಮತ್ತು ನಾಣ್ಯ ಎರಡೂ ರೂಪದಲ್ಲಿ ಲಭ್ಯವಿದೆ. ಅಫ್ಘಾನಿಸ್ತಾನ ಬ್ಯಾಂಕ್ ಪ್ರತಿ ಐದು ವರ್ಷಗಳಿಗೊಮ್ಮೆ ಹೊಸ ನೋಟುಗಳನ್ನು ಮುದ್ರಿಸುತ್ತದೆ. ಆದರೆ ಈ ನೋಟುಗಳನ್ನು ಅಫ್ಘಾನಿಸ್ತಾನದಲ್ಲಿ ಮುದ್ರಿಸುವುದಿಲ್ಲ. ಇಂಗ್ಲೆಂಡ್ ನ ಬೇಸಿಂಗ್ ಸ್ಟೋಕ್‌ನಲ್ಲಿರುವ ವಿಶ್ವದ ಅತಿದೊಡ್ಡ ಖಾಸಗಿ ಕರೆನ್ಸಿ ಮುದ್ರಣಾಲಯವಾದ ಲೇ ರಾ ರೂನಲ್ಲಿ ಮುದ್ರಿಸಲಾಗುತ್ತದೆ. ಜಗತ್ತಿನ 140 ದೇಶಗಳ ಕರೆನ್ಸಿಗಳನ್ನು ಇಲ್ಲಿ ಮುದ್ರಿಸಲಾಗುತ್ತದೆ.
ನೋಟಿನ ಭದ್ರತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ನಕಲಿ ಮುದ್ರಣ ಕಷ್ಟ. ಅಫ್ಘಾನಿ ನೋಟುಗಳನ್ನು 01, 05, 10, 50, 100, 500 ಮತ್ತು 1000 ಕರೆನ್ಸಿಯಲ್ಲಿ ಮುದ್ರಿಸಲಾಗುತ್ತದೆ. ಸದ್ಯ ಭಾರತದ 100 ರೂಪಾಯಿಗಳು 115 ಅಫ್ಘಾನಿಗೆ ಸಮ.