ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಕಸವಿನಹಳ್ಳಿ ಮುಖ್ಯರಸ್ತೆಯ ಹರಳೂರು ಬಳಿ ಘಟನೆ ನಡೆದಿದೆ.
ನೇಪಾಳ ಮೂಲದ 20 ವರ್ಷದ ಡೇವಿಡ್ ಕೊಲೆಯಾದ ಯುವಕ. ವೃತ್ತಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಡೇವಿಡ್ ಸಂಜೆ ಸ್ನೇಹಿತರೊಂದಿಗೆ ಬಾರ್ ನಲ್ಲಿ ಪಾರ್ಟಿ ಮಾಡಿದ್ದಾನೆ. ಕುಡಿಯುವ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೊಂದಿಗೆ ಜಗಳವಾಗಿದೆ.
ಬಳಿಕ ಮನೆಗೆ ತೆರಳುತ್ತಿದ್ದ ಡೇವಿಡ್ ಮೇಲೆ ಸ್ನೇಹಿತರು ದಾಳಿ ಮಾಡಿದ್ದಾರೆ. ಚಾಕುವಿನಿಂದ ಇರಿದು, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಡೇವಿಡ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆ ಆರೋಪಿಗಳು ಮತ್ತು ಮೃತ ಡೇವಿಡ್ ನೇಪಾಳದ ನಿವಾಸಿಗಳಾಗಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.