
ಬೆಂಗಳೂರು: 7ನೇ ವೇತನ ಆಯೋಗದ ವರದಿಯ ಅನ್ವಯ ವೇತನ ಪರಿಷ್ಕರಣೆ ಮತ್ತು ಸೌಲಭ್ಯಗಳನ್ನು ಯಥಾವತ್ ಜಾರಿಗೊಳಿಸಬೇಕು. ಇಲ್ಲದಿದ್ದರೆ ಫೆಬ್ರವರಿ 1ರಿಂದ ಮುಷ್ಕರ ನಡೆಸಬೇಕು ಎಂದು ಕೆಎಂಎಫ್ ನೌಕರರು ಒತ್ತಡ ಹೇರತೊಡಗಿದ್ದಾರೆ.
ಕೆಎಂಎಫ್ ಮತ್ತು ಎಲ್ಲಾ ಒಕ್ಕೂಟಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಮತ್ತು ಸೌಲಭ್ಯ ಅನ್ವಯಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಆಕ್ರೋಶಗೊಂಡಿದ್ದು, ಬೇಡಿಕೆ ಈಡೇರಿಸಲು ಫೆಬ್ರವರಿ 1ರಿಂದ ಮುಷ್ಕರ ಕೈಗೊಳ್ಳುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒತ್ತಡ ಹಾಕುತ್ತಿದ್ದಾರೆ. ಈ ಕುರಿತಾಗಿ ಕೆಎಂಎಫ್ ಅಧಿಕಾರಿಗಳ ಸಂಘದಿಂದ ಕೆಎಂಎಫ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
2024ರ ಅ. 1ರಿಂದ ಪರಿಷ್ಕೃತ ವೇತನ ಸೌಲಭ್ಯ ನೀಡಬೇಕೆಂದು ಒತ್ತಾಯಿಸಲಾಗಿದೆ. ವೇತನ ಪರಿಷ್ಕರಣೆ ಬಗ್ಗೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಮುಷ್ಕರ ಕೈಗೊಳ್ಳಲು ಮುಂದಾಗಿದ್ದಾರೆ.