ಮುಂಬೈ ವಿರುದ್ಧದ ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಲಖನೌ ಸೂಪರ್ ಜಾಯಿಂಟ್ಸ್ ತಂಡದ ಸ್ಟಾರ್ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ಭಾನುವಾರದಂದು ಅದೇ ತಂಡದ ವಿರುದ್ಧ ನಡೆದ ಮತ್ತೊಂದು ಪಂದ್ಯದಲ್ಲಿ ಅಜೇಯ 103 ರನ್ ಬಾರಿಸಿದ್ದಾರೆ. ಈ ಮೂಲಕ ತಮ್ಮ ತಂಡದ ಗೆಲುವಿಗೆ ಕಾರಣಕರ್ತರಾಗಿದ್ದಾರೆ.
ಮುಂಬೈನ ವಾಂಖಡೆ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜಾಯಿಂಟ್ಸ್ ತಂಡ ಆರು ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತು. ಈ ಪೈಕಿ ಕೆ.ಎಲ್. ರಾಹುಲ್ ಅವರದ್ದೇ 103 ರನ್ನುಗಳು ಎಂಬುದು ಗಮನಾರ್ಹ.
BIG NEWS: ಸಿದ್ದರಾಮಯ್ಯ ಪರ MLC ಹೆಚ್.ವಿಶ್ವನಾಥ್ ಬ್ಯಾಟಿಂಗ್
ಬಳಿಕ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 132 ರನ್ ಗಳಿಸಿದ್ದು, 36 ರನ್ನುಗಳ ಅಂತರದಿಂದ ಪರಾಭವಗೊಂಡಿತು. ಮುಂಬೈ ಇಂಡಿಯನ್ಸ್ ತಂಡ ಈವರೆಗೆ ತಾನಾಡಿದ ಎಂಟು ಪಂದ್ಯಗಳಲ್ಲೂ ಪರಾಭವಗೊಂಡಿದ್ದು, ಭಾನುವಾರದಂದು ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ತನ್ನ ಹೋರಾಟವನ್ನು ಅಧಿಕೃತವಾಗಿ ಅಂತ್ಯಗೊಳಿಸಿದೆ.