ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ಅವರ ಚೊಚ್ಚಲ ಸಿನಿಮಾ ತಡಪ್ ಇಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಅಹಾನ್ ಶೆಟ್ಟಿ ಹಿರಿಯ ಸಹೋದರಿ ಅಥಿಯಾ ಶೆಟ್ಟಿಯ ಬಾಯ್ಫ್ರೆಂಡ್ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ಅಹಾನ್ ಶೆಟ್ಟಿಯ ಈ ಪ್ರಯತ್ನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ.
ಅಹಾನ್ ಜೊತೆಗಿನ ಹಳೆಯ ಫೊಟೋವೊಂದನ್ನು ಶೇರ್ ಮಾಡಿರುವ ಕೆ.ಎಲ್. ರಾಹುಲ್, ಇನ್ನು ಹಿಂತಿರುಗಿ ನೋಡುವ ಸಮಯವೇ ಬರೋದಿಲ್ಲ ಸಹೋದರ. ನಿನ್ನ ಬಗ್ಗೆ ಹೆಮ್ಮೆಯಿದೆ. ದೊಡ್ಡ ದೊಡ್ಡ ವಿಚಾರಗಳೇ ನಿನ್ನ ಮುಂದೆ ಬರಲಿ. ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗೆ ಲೈಕ್ ಒತ್ತಿದ ಅಥಿಯಾ ಶೆಟ್ಟಿ ಬೆಸ್ಟ್ ಬಾಯ್ಸ್ ಎಂದು ಕಮೆಂಟ್ ಕೂಡ ಮಾಡಿದ್ದಾರೆ.
ತಡಪ್ ಪ್ರೀಮಿಯರ್ ಶೋನಲ್ಲಿ ಕೆ.ಎಲ್. ರಾಹುಲ್ ಹಾಗೂ ಅಥಿಯಾ ಶೆಟ್ಟಿ ರೆಡ್ ಕಾರ್ಪೆಟ್ನಲ್ಲಿ ಮೊಟ್ಟ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಅಥಿಯಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದ್ದರು. ರಾಹುಲ್ ಬ್ಲೇಜರ್, ಟೀಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು.
ರಾಹುಲ್ ಹಾಗೂ ಅಥಿಯಾ ಈವರೆಗೆ ತಾವು ರಿಲೇಷನ್ಶಿಪ್ನಲ್ಲಿ ಇರುವ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ಆಗಾಗ ಪ್ರದರ್ಶನ ಮಾಡುತ್ತಲೇ ಇರ್ತಾರೆ. ಕಳೆದ ತಿಂಗಳು ಅಥಿಯಾ ಹುಟ್ಟಿದ ಹಬ್ಬದಂದು ಅಥಿಯಾ ಫೋಟೋ ಶೇರ್ ಮಾಡಿದ್ದ ಕೆ.ಎಲ್. ರಾಹುಲ್ ಜನ್ಮದಿನದ ಶುಭಾಶಯಗಳು ಎಂದು ಶೀರ್ಷಿಕೆ ಬರೆದು ಹೃದಯದ ಚಿಹ್ನೆಯನ್ನು ಹಾಕಿದ್ದರು.
https://www.instagram.com/p/CXAytCtAsvF/?utm_source=ig_web_copy_link