ಕೆ.ಎಲ್. ರಾಹುಲ್ ಭಾರತ ಕ್ರಿಕೆಟ್ ತಂಡದಲ್ಲಿರುವ ಅತ್ಯುತ್ತಮ ಬ್ಯಾಟ್ಸ್‌ಮನ್. ಕ್ರಿಕೆಟ್ ಪಿಚ್‌ನಲ್ಲಿ ಬ್ಯಾಟ್ ಹಿಡಿದುಕೊಂಡು ಎಂಟ್ರಿ ಆದ್ರೆ ಸಾಕು ಎದುರಾಳಿಗಳ ಧೂಳಿಪಟ ಆಗೋದು ಫಿಕ್ಸ್ ಆಗಿರುತ್ತೆ. ಕೆ.ಎಲ್. ರಾಹುಲ್ ಈಗ ಭಾರತದ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಜೊತೆ ನೆಟ್‌ನಲ್ಲಿ ಮುಖಾಮುಖಿಯಾಗಿ ಆಡಿದ್ದಾರೆ.
ರಾಹುಲ್ ಇತ್ತೀಚೆಗೆ ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಗುಣಮುಖರಾಗಿರುವ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಅಂತಾರಾಷ್ಟ್ರೀಯ ಸರಣಿಗೆ ರಾಹುಲ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.
ಸದ್ಯಕ್ಕೆ ರಾಹುಲ್ ಮರಳಿ ಬ್ಯಾಟಿಂಗ್ ಅಭ್ಯಾಸಕ್ಕೆ ಇಳಿದಿರುವುದು ಟೀಮ್ ಇಂಡಿಯಾಗೆ ಸಂತಸದ ವಿಚಾರ. ಇದಕ್ಕಿಂತ ದೊಡ್ಡ ಸುದ್ದಿ ಏನಂದ್ರೆ, ಅವರು ಅಭ್ಯಾಸಕ್ಕಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಎಸೆತಗಳನ್ನ ಎದುರಿಸಿದ್ದು. ಈ 11ಸೆಕೆಂಡಿನ ವಿಡಿಯೋ ವೈರಲ್ ಆಗಿದ್ದು, ರಾಹುಲ್, ಜೂಲನ್ ಗೋಸ್ವಾಮಿ ಎಸೆತಗಳನ್ನ ಎದುರಿಸಿ ಕಟ್ ಶಾಟ್‌ಗಳನ್ನ ಬಾರಿಸುತ್ತಿದ್ದಾರೆ.
ರಾಹುಲ್ ಫಿಟ್ ನೆಸ್ ಟೆಸ್ಟ್ ನ ತೇರ್ಗಡೆ ಆಗಿದ್ದೇ ಆದ್ರೆ, ಮುಂದಿನ ದಿನಗಳಲ್ಲಿ ಕೆರೆಬಿಯನ್ ನಲ್ಲಿ ನಡೆಯಲಿರುವ 5 ಟಿ- 20 ಪಂದ್ಯಗಳನ್ನ ಆಡುವುದನ್ನ ನೋಡಬಹುದಾಗಿದೆ.
https://twitter.com/Juman_gunda/status/1548932847062228992?ref_src=twsrc%5Etfw%7Ctwcamp%5Etweetembed%7Ctwterm%5E1548932847062228992%7Ctwgr%5E%7Ctwcon%5Es1_&ref_url=https%3A%2F%2Fsports.ndtv.com%2Fcricket%2Fvideo-of-kl-rahul-facing-jhulan-goswami-in-nets-at-national-cricket-academy-goes-viral-watch-3171291