
ರಾಯಚೂರು: ಶಾಲಾ ಮಕ್ಕಳು ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾಗಿ ಗದ್ದೆಗೆ ಉರುಳಿರುವ ಘಟನೆ ರಾಯಚೂರು ಜಿಲ್ಲೆಯ ದೆವದುರ್ಗ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ಕೆಕೆಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅಂಜಳ ಕ್ರಾಸ್ ಬಳಿ ಬಸ್ ಅಪಘಾತಕ್ಕೀಡಾಗಿದೆ.
ಬಸ್ ನಲ್ಲಿದ್ದ ಹಲವು ಮಕ್ಕಳಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ಅಪಘಾತದಿಂದಾಗಿ ಬೆಳಗಿನವರೆಗೂ ಮಕ್ಕಳು, ಶಿಕ್ಷಕರು ರಸ್ತೆಯಲ್ಲಿಯೇ ಚಳಿಯಲ್ಲಿ ಪರದಾಡಿದ್ದಾರೆ. ಬಳಿಕ ದೇವದುರ್ಗ ಘಟಕದಿಂದ ಮತ್ತೊಂದು ಬಸ್ ಕಳುಹಿಸಿ ಮಕ್ಕಳು, ಶಿಕ್ಷಕರನ್ನು ಕರೆದೊಯ್ಯಲಾಗಿದೆ.