ಮರ್ಸಿಡೆಸ್ – ಬೆಂಜ್ ಭಾರತವಲ್ಲದೆ, ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರ್ಯಾಂಡ್ಗಳಲ್ಲೊಂದು. ಜಿ- ವ್ಯಾಗನ್ ಎಂಬುದು ಮರ್ಸಿಡಿಸ್-ಬೆನ್ಜ್ನ ಅತ್ಯಂತ ಪ್ರಸಿದ್ಧ ವಾಹನ. ಭಾರತೀಯ ಕ್ರಿಕೆಟಿಗ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ನಾಯಕ ಶ್ರೇಯಸ್ ಅಯ್ಯರ್ ಹೊಸ ಮರ್ಸಿಡೆಸ್ ಬೆಂಜ್ ಜಿ63 ಎಎಂಜಿ (Mercedes-Benz G63 AMG) ಅನ್ನು ಖರೀದಿಸಿ ಕಾರು ಪ್ರಿಯರ ಗಮನ ಸೆಳೆದಿದ್ದಾರೆ.
ಇದರ ಎಕ್ಸ್ ಷೋರೂಂ ಬೆಲೆ ಬರೋಬ್ಬರಿ 2.45 ಕೋಟಿ ರೂಪಾಯಿ. ಎಸ್ಯುವಿ ಸೆಲೆನೈಟ್ ಗ್ರೇ ಮೆಟಾಲಿಕ್ ಗಮನ ಸೆಳೆಯುವಂತೆ ಮಾಡಿದೆ. ಮರ್ಸಿಡೆಸ್ ಬೆಂಜ್ ಜಿ-ವ್ಯಾಗನ್ (Mercedes-Benz G-Wagen)ಗೆ ಕಾಲಾನುಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಎಸ್ಯುವಿಯ ವಿನ್ಯಾಸವನ್ನು ಹೆಚ್ಚು ಬದಲಾಯಿಸಿಲ್ಲ. ಇದು ರೆಟ್ರೋದಂತೆ ಕಾಣುತ್ತದೆ. ಆದರೆ ಹೊಸ ವಾಹನದ ಐಷಾರಾಮಿತನ ಹೊಂದಿದೆ. ಇದು ಅನೇಕ ಸೆಲೆಬ್ರಿಟಿಗಳು ಜಿ- ವ್ಯಾಗನ್ ಖರೀದಿಸಲು ಪ್ರಾಥಮಿಕ ಕಾರಣ.
ಒಂದು ಟೊಯೊಟಾ ಫಾರ್ಚೂನರ್ ಮಾರಾಟವಾದರೆ ಸರ್ಕಾರಕ್ಕೆ 18 ಲಕ್ಷ ರೂ., ಕಂಪನಿಗೆ 40,000 ರೂ. ಮಾತ್ರ….!
4×4 ಸಿಸ್ಟಮ್ ಇದರ ವಿಶೇಷತೆ. G63 AMG ಆಗಿರುವುದರಿಂದ, ಇದು 4.0 ಲೀಟರ್ V8 ಬಿಟರ್ಬೊ ಪೆಟ್ರೋಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ.
ಜಿಮ್ಮಿ ಶೆರ್ಗಿಲ್, ಸಾರಾ ಅಲಿ ಖಾನ್, ಹಾರ್ದಿಕ್ ಪಾಂಡೆ, ಅಖಿಲ್ ಅಕ್ಕಿನೇನಿ, ರಣಬೀರ್ ಕಪೂರ್, ಅನಂತ್ ಅಂಬಾನಿ, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್ ಮತ್ತು ಆಸಿಫ್ ಅಲಿ ಮುಂತಾದವರು ಭಾರತದ ಕೆಲವು ಜಿ- ವ್ಯಾಗನ್ ಮಾಲೀಕರು.