ಕೋಲ್ಕತದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗಲೇ ಹೃದಯಾಘಾತವಾಗಿ ಹಾಡುಗಾರ ಕೃಷ್ಣಕುಮಾರ್ ಕುನ್ನತ್ (53) ಮಂಗಳವಾರ ನಿಧನರಾಗಿದ್ದರು. ಇದು ಸಂಗೀತ ಪ್ರೇಮಿಗಳಿಗೆ ಆಘಾತವನ್ನು ಉಂಟುಮಾಡಿದ್ದು, ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರಲ್ಲೂ ದಿವಂಗತ ಓಂ ಪುರಿ ಅವರ ಮಾಜಿ ಪತ್ನಿ ನಂದಿತಾ ಪುರಿ, “ಕೋಲ್ಕತ ಕಿಲ್ಡ್ “ ಸಿಂಗರ್ ಎಂದು ಶಾಕಿಂಗ್ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಅಪ್ಡೇಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ಕೆಕೆ ಅವರು ನಗರದಲ್ಲಿ ಸತತ ಎರಡು ಕಾರ್ಯಕ್ರಮಗಳನ್ನು ನಡೆಸಿಕೊಡಬೇಕಾಗಿತ್ತು. ಅವರು ಅಸ್ವಸ್ಥರಾಗಿದ್ದರು ಮತ್ತು ಸಂಗೀತ ಕಚೇರಿಯ ನಂತರ ತಮ್ಮ ಹೋಟೆಲ್‌ಗೆ ಮರಳಿದರು ಎಂದು ನಂಬಲಾಗಿದೆ.
BIG NEWS: ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ACB ಬಲೆಗೆ
ಅವರು ಅಸ್ವಸ್ಥರಾಗಿದ್ದಾರೆ ಎಂದು ತೋರಿಸುವ ಕೆಲವು ವೀಡಿಯೊಗಳು ಆನ್‌ಲೈನ್‌ನಲ್ಲಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಈ ಘಟನೆಯ ಬೆನ್ನಿಗೆ ನಂದಿತಾ ಪುರಿ ಅವರು ಫೇಸ್‌ಬುಕ್‌ನಲ್ಲಿ “ಪಶ್ಚಿಮ ಬಂಗಾಳಕ್ಕೆ ನಾಚಿಕೆಯಾಗುತ್ತಿದೆ. ಕೋಲ್ಕತ್ತಾ ಕೆಕೆಯನ್ನು ಕಳೆದುಕೊಂದಿದೆ. 2500 ಸಾಮರ್ಥ್ಯದ ಸ್ಥಳದಲ್ಲಿ 7,000 ಜನರಿದ್ದ ಕಾರಣ ಹಾಲ್‌ನಲ್ಲಿ ಹವಾನಿಯಂತ್ರಣ ವಿಫಲವಾಗಿತ್ತು. ಈ ಬಗ್ಗೆ ಗಾಯಕ ಬೆವರು ಸುರಿಸುತ್ತ ನಾಲ್ಕು ಬಾರಿ ಆಯೋಜಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.
ಸ್ಥಳದಲ್ಲಿ ವೈದ್ಯಾಧಿಕಾರಿಗಳು, ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರಲಿಲ್ಲ. ನಿರ್ಣಾಯಕ ಕ್ಷಣಗಳನ್ನು ಸರ್ಕಾರ ಹಾಳುಗೆಡವಿದೆ. ಇದಕ್ಕೆ ಸಿಬಿಐ ತನಿಖೆ ಅಗತ್ಯ” ಎಂದು ಆಗ್ರಹಿಸಿದ್ದಾರೆ.