ರಾಮನಗರ: ಡಿನ್ನರ್ ಮೀಟಿಂಗ್ ಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.
ಏಕೆ ಡಿನ್ನರ್ ಕೊಡಬಾರದೇ? ಅದು ಅವರ ವೈಯಕ್ತಿಕ, ನಾನೂ ನಾಲ್ವರನ್ನು ಊಟಕ್ಕೆ ಕರೆಯುತ್ತೇನೆ. ಅವರು ಬರುತ್ತಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಉಪಮುಖ್ಯಮಂತ್ರಿ ಇಲ್ಲವೆಂದು ಊಟಕ್ಕೆ ಕರೆಯಲೇಬಾರದಾ ಎಂದು ಪ್ರಶ್ನಿಸಿದ್ದಾರೆ.
ಉಪಮುಖ್ಯಮಂತ್ರಿ ಇದ್ದಾಗಲೂ ಊಟಕ್ಕೆ ಕರೆದಿದ್ದೇವೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಕಂಪ್ಲೇಂಟ್ ಮಾಡಿದ್ದಾರಾ? ಅಧ್ಯಕ್ಷರನ್ನು ನೇಮಕ ಮಾಡೋದು, ಬದಲಿಸುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಅದರ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಬಿಡದಿಯಲ್ಲಿ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.