ಕಿವಿ ಹಣ್ಣು ದೇಹದ ಆರೊಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ಸುಲಭವಾಗಿ ರುಚಿಯಾದ ಶರಬತ್ತು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
4-5-ಕಿವಿಹಣ್ಣು, 3 ಎಸಳು-ಪುದೀನಾ, 1 ಟೀ ಸ್ಪೂನ್- ಜೀರಿಗೆ ಪುಡಿ, 4 ಟೇಬಲ್ ಸ್ಪೂನ್-ಸಕ್ಕರೆ, ಉಪ್ಪು-ರುಚಿಗೆ ತಕ್ಕಷ್ಟು, 2 ಟೀ ಸ್ಪೂನ್-ಬ್ಲ್ಯಾಕ್ ಸಾಲ್ಟ್, ಲಿಂಬೆಹಣ್ಣಿನ ರಸ-2 ಚಮಚ.
ಮಾಡುವ ವಿಧಾನ:
ಒವನ್ ಅಥವಾ ಗ್ಯಾಸ್ ನಲ್ಲಿ ಮೊದಲು ಕಿವಿ ಹಣ್ಣನ್ನು ರೋಸ್ಟ್ ಮಾಡಿಕೊಳ್ಳಿ. ಇದರ ಮೇಲೆ ಸಿಪ್ಪೆ ಗರಿ ಗರಿಯಾಗಿ ಸುಟ್ಟು ಎಬ್ಬಿಸುವುದಕ್ಕೆ ಬರುವಂತಿರಬೇಕು. ರೋಸ್ಟ್ ಮಾಡಿದ ಕಿವಿ ಹಣ್ಣು ತಣ್ಣಗಾದ ಮೇಲೆ ಅದರ ಮೇಲಿನ ಸಿಪ್ಪೆ ತೆಗೆದು ಒಳಭಾಗವನ್ನು ಮಿಕ್ಸಿಗೆ ಹಾಕಿ ಅದಕ್ಕೆ ಪುದೀನಾ ಎಲೆ, ಸಕ್ಕರೆ, ಸ್ವಲ್ಪ ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ.
ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಉಪ್ಪು, ಬ್ಲ್ಯಾಕ್ ಸಾಲ್ಟ್, ಲಿಂಬೆಹಣ್ಣಿನ ರಸ, ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ. ಶರಬತ್ತಿನ ಹದಕ್ಕೆ ಬರುವಷ್ಟು ನೀರು ಸೇರಿಸಿ ಸರ್ವ್ ಮಾಡಿ ಮಾಡಿ.