ಬೆಂಗಳೂರು: ಗಾಳಿಪಟದ ದಾರ ಕತ್ತಿಗೆ ತಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಬೆಂಳೂರಿನಲ್ಲಿ ನಡೆದಿದೆ. ಚೈನೀಸ್ ಮಾಂಜಾದಿಂದ ಯುವಕನ ಕತ್ತು ಕೊಯ್ದು ಗಂಭೀರ ಗಾಯವಾಗಿದೆ. ಕೂದಲೆಳೆಯ ಅಂತರದಲ್ಲಿ ಸವಾರ ಪಾರಾಗಿದ್ದಾನೆ.
ಖಾಸಗಿ ಕಂಪನಿಯ ಉದ್ಯೋಗಿ ಮಲ್ಲಿಕಾರ್ಜುನ ಗಾಯಗೊಂಡವರು. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಡುಗೋಡಿ ಸಂಚಾರ ಠಾಣೆ ಎದುರು ಹೋಗುವಾಗ ಗಾಳಿಪಟದ ಮಾಂಜಾ ದಾರ ಅವರ ಕುತ್ತಿಗೆಗೆ ಸಿಕ್ಕಿಕೊಂಡಿದ್ದು, ಅದನ್ನು ಎಳೆಯುವ ಭರದಲ್ಲಿ ಕೈಬೆರಳುಗಳಿಗೆ ಗಾಯವಾಗಿದೆ. ಕುತ್ತಿಗೆಗೆ ತೀವ್ರ ಗಾಯವಾಗಿದೆ.
ಗಾಳಿಪಟ ಹಾರಿಸುವ ಇಂತಹ ದಾರ ನಿಷೇಧಿಸಬೇಕು. ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ನಾನು ಬದುಕಿದ್ದೇ ಹೆಚ್ಚು ಎಂದು ಮಲ್ಲಿಕಾರ್ಜುನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆನ್ನಲಾಗಿದೆ. ಈ ಕುರಿತಂತೆ ದೂರು ದಾಖಲಾಗಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ದೇಶಾದ್ಯಂತ ಗಾಳಿಪಟ ಹಾರಿಸುವ ಮಾಂಜಾ ನಿಷೇಧಿಸಿ ಆದೇಶ ಹೊರಡಿಸಿದ್ದರೂ. ಚೈನೀಸ್ ಮಾಂಜಾ ಮಾರಾಟ ಮಾಡಲಾಗ್ತಿದೆ ಎನ್ನಲಾಗಿದೆ.