ಹಾಲಿಗೆ ಸ್ವಲ್ಪ ಹುಳಿ ಮೊಸರು ಹಾಕಿದ್ರೆ ಹಾಲು ಮೊಸರಾಗುತ್ತೆ. ಆದ್ರೆ ಇದನ್ನು ಹೇಳಿದಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಮನೆಯಲ್ಲಿ ಮಾಡಿದ ಮೊಸರು, ಅಂಗಡಿಯಲ್ಲಿ ಮಾಡಿದ ಮೊಸರಿನಷ್ಟು ಗಟ್ಟಿಯಾಗಿರುವುದಿಲ್ಲ ಎಂಬುದು ಬಹುತೇಕ ಮಹಿಳೆಯರ ಸಮಸ್ಯೆ. ಇದಕ್ಕೆ ನಾವು ಸುಲಭ ಉಪಾಯ ಹೇಳ್ತೆವೆ.
ನಿಂಬೆ ಹಣ್ಣಿನ ಸಹಾಯದಿಂದ ಮೊಸರು ತಯಾರಿಸಬಹುದು. ಮೊದಲು ಹಾಲನ್ನು ಬಿಸಿ ಮಾಡಬೇಕು. ನಂತ್ರ ಅದಕ್ಕೆ ನಿಂಬೆ ಹಣ್ಣಿನ ಹನಿಯನ್ನು ಹಾಕಬೇಕು. ಸರಿಯಾಗಿ ಮಿಶ್ರಣ ಮಾಡಿ ಅದನ್ನು 10-12 ಗಂಟೆಗಳ ಕಾಲ ಮುಚ್ಚಿಡಬೇಕು. ನಂತ್ರ ಗಟ್ಟಿಯಾದ ಮೊಸರು ಸಿದ್ಧವಾಗುತ್ತದೆ.
ಹಸಿಮೆಣಸಿನ ಕಾಯಿಯಿಂದಲೂ ಮೊಸರು ಸಿದ್ಧಪಡಿಸಬಹುದು. ಮೊದಲು ಹಾಲನ್ನು ಬಿಸಿ ಮಾಡಬೇಕು. ನಂತ್ರ ಅದನ್ನು ಗ್ಲಾಸಿನ ಪಾತ್ರೆಗೆ ಹಾಕಬೇಕು. ಅದಕ್ಕೆ ಹಸಿಮೆಣಸಿನ ಕಾಯಿಯನ್ನು ಹಾಕಿ 10-12 ಗಂಟೆಗಳ ಕಾಲ ಮುಚ್ಚಿಡಿ. ಗಟ್ಟಿ ಮೊಸರು ಸಿದ್ಧವಾಗುತ್ತದೆ.
ಸಾಮಾನ್ಯವಾಗಿ ಹುಳಿ ಮೊಸರನ್ನು ಹಾಲಿಗೆ ಹಾಕಿ ಮೊಸರು ಮಾಡಲಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಮೊಸರಿರುವುದಿಲ್ಲ. ಆಗ ಮನೆಯಲ್ಲಿರುವ ಹುಳಿ ಪದಾರ್ಥವನ್ನು ಬಳಸಿ ನೀವು ಮೊಸರು ಮಾಡಬಹುದು.