ಕೂದಲ ರಕ್ಷಣೆಗೆ ಮೊಸರು ಒಳ್ಳೆಯ ಮದ್ದು. ಅನೇಕ ವರ್ಷಗಳಿಂದಲೂ ಕೂದಲ ರಕ್ಷಣೆಗೆ ಮೊಸರಿನ ಬಳಕೆಯಾಗ್ತಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣದ ಜೊತೆಗೆ ಬಹಳಷ್ಟು ಜೀವಸತ್ವಗಳನ್ನು ಮೊಸರು ಹೊಂದಿದೆ. ಇದು ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಮೊಸರು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಶುಷ್ಕ, ಹೊಟ್ಟು, ಉದುರುವ ಸಮಸ್ಯೆಗೆ ಮೊಸರು ಪರಿಹಾರ ನೀಡುತ್ತದೆ.
ಶುಷ್ಕ ಕೂದಲಿನಿಂದ ಮುಕ್ತಿ ಹೊಂದಬಯಸುವವರು ಮೊಸರಿಗೆ ನಿಂಬೆ ರಸ, ಮೆಂತ್ಯೆ ಮದ್ದನ್ನು ಬಳಸಬಹುದು. ಒಂದು ಕಪ್ ಮೊಸರಿಗೆ 5 ಚಮಚ ಮೆಂತ್ಯೆ ಪುಡಿ ಹಾಗೂ ಒಂದು ಚಮಚ ನಿಂಬೆ ರಸ ಬೆರೆಸಬೇಕು. ಇದನ್ನು ಬ್ರೆಷ್ ಸಹಾಯದಿಂದ ಕೂದಲ ಬುಡಕ್ಕೆ ಹಚ್ಚಿ, 40 ನಿಮಿಷ ಬಿಡಿ. ನಂತ್ರ ನೈಸರ್ಗಿಕ ಶಾಂಪೂ ಬಳಸಿ ತಲೆಯನ್ನು ಸ್ವಚ್ಛಗೊಳಿಸಿ. ವಾರಕ್ಕೆ ಎರಡು ದಿನ ಮಾಡ್ತಾ ಬಂದ್ರೆ ತಿಂಗಳಲ್ಲಿ ಫಲಿತಾಂಶ ಕಾಣಬಹುದು.
ಕೂದಲನ್ನು ಬಲಪಡಿಸಲು ಮೊಸರಿನ ಜೊತೆ ಮೊಟ್ಟೆ, ಆಲಿವ್ ಆಯಿಲ್, ಅಲೋವೆರಾ ಜೆಲ್ ಹಾಗೂ ತುಳಸಿ ಪೇಸ್ಟ್, ಕರಿಬೇವಿನ ಪೇಸ್ಟ್ ಬಳಸಿ. ಒಂದು ಕಪ್ ಮೊಸರಿಗೆ ಒಂದು ಮೊಟ್ಟೆ, 2 ಚಮಚ ಆಲಿವ್ ಆಯಿಲ್, 3 ಚಮಚ ಅಲೋವೆರಾ ಜೆಲ್, 2 ಚಮಚ ತುಳಸಿ ಪೇಸ್ಟ್ ಹಾಗೂ ಕರಿಬೇವಿನ ಪೇಸ್ಟ್ 2 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಸ್ವಚ್ಛಗೊಳಿಸಿದ್ರೆ ತಲೆ ಕೂದಲು ಗಟ್ಟಿಯಾಗಿ ಉದುರುವ ಸಮಸ್ಯೆ ಕಾಡುವುದಿಲ್ಲ.