
ಬೆಂಗಳೂರು: ಅರ್ಚಕರಿಗೆ ಮೂರು ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರ ಅರ್ಚಕರಿಗೆ ಮೂರು ತಿಂಗಳ ಮುಂಗಡ ತಸ್ತೀಕ್ ಬಿಡುಗಡೆ ಮಾಡಿದೆ.
ಒಟ್ಟು 33.45 ಕೋಟಿ ರೂಪಾಯಿ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದ 27 ಸಾವಿರ ದೇವಾಲಯಗಳ ಅರ್ಚಕರಿಗೆ ಸೌಲಭ್ಯ ಸಿಗಲಿದೆ. ಕೋವಿಡ್ ಲಾಕ್ ಡೌನ್ ಹಿನ್ನೆಲೆ ಮುಂಗಡ ಬಿಡುಗಡೆ ಮಾಡಲಾಗಿದೆ.
1500 ರೂಪಾಯಿ ಮೊತ್ತದ ಆಹಾರ ಕಿಟ್ ಗಳನ್ನು ಕೂಡ ಅರ್ಚಕರಿಗೆ ವಿತರಿಸಲಾಗುತ್ತದೆ. ಸುಮಾರು 50 ಸಾವಿರ ಅರ್ಚಕರು ಹಾಗೂ ಸಿಬ್ಬಂದಿಗೆ ಕಿಟ್ ನೀಡಲಾಗುವುದು ಎಂದು ಹೇಳಲಾಗಿದೆ.