ಹೆಚ್ಚಿನ ಜನರು ಕೆಲಸದ ಒತ್ತಡದಿಂದಾಗಿ ತಮ್ಮ ವೈಯಕ್ತಿಕ ಜೀವನವನ್ನೇ ಮರೆತುಬಿಡುತ್ತಿದ್ದಾರೆ. ಇದರಿಂದ ವೈವಾಹಿಕ ಜೀವನದಲ್ಲಿ ಆಗಲಿ, ಪ್ರೇಮ ಸಂಬಂಧದಲ್ಲಿ ಆಗಲಿ ಉದ್ವೇಗ ಉಂಟಾಗುತ್ತದೆ. ಇದು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಕೆಡಿಸಬಹುದು. ಆದರೆ ನೀವು ಪ್ರತಿದಿನ ಕೇವಲ 6 ಸೆಕೆಂಡುಗಳ ಕಾಲ ಸಂಗಾತಿಗೆ ಕಿಸ್ ಹಾಗೂ 20 ಸೆಕೆಂಡುಗಳ ಕಾಲ ಹಗ್ ಮಾಡಿದರೆ ಅದರಿಂದ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ಇದರಿಂದ ನಿಮಗೆ ಅನೇಕ ಪ್ರಯೋಜನವು ದೊರೆಯುತ್ತದೆಯಂತೆ.
ನೀವು 6 ಸೆಕೆಂಡುಗಳ ಕಾಲ ನಿಮ್ಮ ಸಂಗಾತಿಗೆ ಕಿಸ್ ಮಾಡಿದರೆ ಆಕ್ಸಿಟೋಸಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುತ್ತದೆಯಂತೆ. ಇದು ನಿಮ್ಮ ಮತ್ತು ಸಂಗಾತಿಯ ನಡುವಿನ ನಂಬಿಕೆ , ಪ್ರೀತಿಯನ್ನು ಹೆಚ್ಚಿಸುತ್ತದೆಯಂತೆ. ನಿಮ್ಮ ಸಂಬಂಧ ಗಟ್ಟಿಯಾಗುತ್ತದೆಯಂತೆ.
ನಿಮ್ಮ ಸಂಗಾತಿಗೆ 6 ಸೆಕೆಂಡುಗಳ ಕಿಸ್ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆಯಂತೆ. ಇದರಿಂದ ಕಾರ್ಟಿಸೋಲ್ ಎನ್ನುವ ಒತ್ತಡದ ಹಾರ್ಮೋನ್ ಬಿಡುಗಡೆ ಮಟ್ಟ ಕಡಿಮೆಯಾಗುತ್ತದೆಯಂತೆ. ಇದರಿಂದ ನಿಮ್ಮ ಮನಸ್ಸಿಗೆ ನಿಮ್ಮದಿ, ಸಂತೋಷ ಸಿಗುತ್ತದೆಯಂತೆ.
ಹಾಗೇ 20 ಸೆಕೆಂಡುಗಳ ಕಾಲ ನಿಮ್ಮ ಸಂಗಾತಿಯನ್ನು ಅಪ್ಪಿಕೊಂಡರೆ ಇದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿಡುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಪ್ಪಿಕೊಳ್ಳುವುದರಿಂದ ನಿಮ್ಮ ಮಾನಸಿಕ ಆರೋಗ್ಯ ಗಟ್ಟಿಯಾಗುತ್ತದೆ.
ಹಾಗಾಗಿ ಕಾಲಕಾಲಕ್ಕೆ ನಿಮ್ಮ ಸಂಗಾತಿಯ ಬಳಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಹಗ್, ಕಿಸ್ ಮಾಡುವ ಮೂಲಕ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸಿ.