ರಾಯಚೂರು ಜಿಲ್ಲೆ ಸಿಂಧನೂರು ಬಸ್ ನಿಲ್ದಾಣದಲ್ಲಿ ಮೈಮರೆತ ಪ್ರೇಮಿಗಳು ಎಲ್ಲರೆದುರಲ್ಲಿ ಸಲ್ಲಾಪ ನಡೆಸಿದ ವಿಡಿಯೋ ವೈರಲ್ ಆಗಿದೆ.
ಸಿಂಧನೂರು ಬಸ್ ನಿಲ್ದಾಣದಲ್ಲಿ ಬಳ್ಳಾರಿ ಕಡೆಗೆ ತೆರಳುವ ಬಸ್ ಗಳು ನಿಲ್ಲುವ ಸ್ಥಳದಲ್ಲಿ ನಿಂತಿದ್ದ ಪ್ರೇಮಿಗಳು ಮೈಮರೆತು ಎಲ್ಲರೆದುರಲ್ಲಿ ಚುಂಬಿಸಿದ್ದಾರೆ. ಮಟಮಟ ಮಧ್ಯಾಹ್ನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪ್ರೇಮಿಗಳ ಸಲ್ಲಾಪದ ದೃಶ್ಯಗಳನ್ನು ಕಂಡವರು ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ.
ಬಸ್ ನಿಲ್ದಾಣದಲ್ಲಿ ನಡೆದ ಇಂತಹ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು, ಯುವತಿಯರು ಹೀಗೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಂದು ಹೋಗುವ ಸ್ಥಳಗಳಲ್ಲಿ ಈ ರೀತಿಯ ಅಸಭ್ಯ ವರ್ತನೆ ಸರಿಯಲ್ಲ ಎಂದು ಹೇಳಲಾಗಿದೆ.