
ಬೆಂಗಳೂರು: ಬೆಂಗಳೂರಿನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ ಯುವಕ, ಯುವತಿ ರಸ್ತೆಯಲ್ಲೇ ಚುಂಬಿಸಿದ್ದ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬೈಕ್ ಮಾಲಿಕನನ್ನು ಪತ್ತೆ ಹಚ್ಚಿ ಸಂಚಾರ ಪೊಲೀಸರು ದಂಡ ಹಾಕಿದ್ದಾರೆ. ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 2 ರಂದು ರಾತ್ರಿ ರಾಗಿಗುಡ್ಡದ ರಸ್ತೆಯಲ್ಲಿ ಘಟನೆ ನಡೆದಿತ್ತು.
ಡ್ಯೂಕ್ ಬೈಕ್ ನಲ್ಲಿ ಇಬ್ಬರು ಯುವಕರು, ಯುವತಿ ಹುಚ್ಚಾಟ ನಡೆಸಿದ್ದರು. ಬೈಕ್ ಹಿಂದೆ ಕುಳಿತಿದ್ದ ಯುವಕ, ಯುವತಿ ರಸ್ತೆಯಲ್ಲಿ ಚುಂಬಿಸಿದ್ದರು. ಇದನ್ನು ಮೊಬೈಲ್ ನಲ್ಲಿ ಮತ್ತೊಬ್ಬ ಬೈಕ್ ಸವಾರ ಸೆರೆ ಹಿಡಿದಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಬೈಕ್ ಮಾಲಿಕನನ್ನು ಪತ್ತೆ ಮಾಡಿ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.