ನವದೆಹಲಿ: ರೈತರ ಪ್ರತಿಭಟನೆ ವಾಪಸ್ ಪಡೆಯುತ್ತೇವೆ. ಪ್ರತಿಭಟನೆಯಿಂದ ನಮ್ಮ ಸಮಿತಿ ಹಿಂದೆ ಸರಿಯಲಿದೆ ಎಂದು ಕಿಸಾನ್ ಮಜ್ದೂರ್ ಸಂಘಟನೆ ಘೋಷಿಸಿದೆ.
ದೆಹಲಿಯಲ್ಲಿ ರೈತ ಮುಖಂಡ ಎಂ.ವಿ. ಸಿಂಗ್ ಈ ಬಗ್ಗೆ ಮಾತನಾಡಿ, ರೈತರ ಪ್ರತಿಭಟನೆ ಹಿಂದೆ ಷಡ್ಯಂತ್ರ ಇದೆ. ಪ್ರತಿಭಟನೆಯ ಹಾದಿ ಬೇರೆ ತಿರುಗುತ್ತಿದೆ. ಹೀಗಾಗಿ ತಕ್ಷಣ ಪ್ರತಿಭಟನೆ ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ರಾಕೇಶ್ ಟಿಕಾಯತ್ ಅವರ ಹೋರಾಟದ ದಾರಿ ಸರಿಯಾಗಿಲ್ಲ. ಪ್ರತಿಭಟನೆ ತಪ್ಪು ದಾರಿ ಹಿಡಿಯುತ್ತಿದೆ. ಬೇರೆಯವರ ನಿರ್ದೇಶನದ ಮೇರೆಗೆ ನಾವು ಧರಣಿ ಮಾಡುವುದಿಲ್ಲ ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ ಮುಖಂಡರು ಹೇಳಿದ್ದಾರೆ.
ಪ್ರತಿಭಟನೆಯಿಂದ ಮತ್ತೊಂದು ಸಂಘಟನೆ ಹಿಂದೆ ಸರಿದಿದೆ. ಕಿಸಾನ್ ಯೂನಿಯನ್ ಹೋರಾಟವನ್ನು ವಾಪಸ್ ಪಡೆದಿದೆ. 58 ದಿನಗಳ ಹೋರಾಟದಿಂದ ಕಿಸಾನ್ ಯೂನಿಯನ್ ಸಂಘಟನೆ ಹಿಂದೆ ಸರಿದಿದೆ. ದೆಹಲಿಯಲ್ಲಿ ನಡೆದ ಹಿಂಸಾಚಾರ ಬೇಸರ ತರಿಸಿದ್ದು ಹೀಗಾಗಿ ಹೋರಾಟದಿಂದ ಹಿಂದೆ ಸರಿಯುತ್ತೇವೆ ಎಂದು ಠಾಗೂರ್ ಭಾನು ಪ್ರತಾಪ್ ಸಿಂಗ್ ಘೋಷಣೆ ಮಾಡಿದ್ದಾರೆ.