ಹೋಳಿ ಹಬ್ಬಕ್ಕಿಂತ ಮೊದಲು ಮೋದಿ ಸರ್ಕಾರ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 7 ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ವರ್ಗಾಯಿಸುತ್ತಿದೆ. ಕೆಲ ರೈತರಿಗೆ ಈಗಾಗಲೇ 7ನೇ ಕಂತಿನ ಹಣ ಸಿಕ್ಕಿದೆ. ಆದ್ರೆ ಮತ್ತೆ ಕೆಲ ರೈತರ ಖಾತೆಗೆ ಹಣ ವರ್ಗಾವಣೆಯಾಗಿರಲಿಲ್ಲ. ಈಗ ಹಣ ಖಾತೆಗೆ ಬರಲು ಶುರುವಾಗಿದೆ.
ರೈತರ ಖಾತೆಯನ್ನು ಪರಿಶೀಲಿಸಿ ಹಣ ವರ್ಗಾವಣೆ ಮಾಡಲಾಗ್ತಿದೆ. ಕೆಲ ರೈತರು ಕಿಸಾನ್ ಸಮ್ಮಾನ್ ನಿಧಿಯ ಲಾಭ ಪಡೆಯಲು ಸುಳ್ಳು ಮಾಹಿತಿ ನೀಡಿದ್ದರು. ಹಾಗಾಗಿ ಎಲ್ಲ ರೈತರ ದಾಖಲೆ ಪರಿಶೀಲನೆ ನಡೆಸಿ, ಸರ್ಕಾರ ಹಣ ವರ್ಗಾವಣೆ ಮಾಡ್ತಿದೆ. ಸುಳ್ಳು ದಾಖಲೆ ನೀಡಿದ ರೈತರ ಖಾತೆಯಿಂದ ಹಣ ವಾಪಸ್ ಪಡೆಯುತ್ತಿದೆ.
ಮುಂದಿನ ತಿಂಗಳು, ಏಪ್ರಿಲ್ 1ರಿಂದ ಕಿಸಾನ್ ಸಮ್ಮಾನ್ ನಿಧಿ ಖಾತೆಗೆ ಎಂಟನೇ ಕಂತಿನ ಹಣ ವರ್ಗಾವಣೆಯಾಗಲಿದೆ. ಹೋಳಿ ಮುಗಿದ ನಂತ್ರ ವಿತ್ತೀಯ ವರ್ಷ ಶುರುವಾಗಲಿದ್ದು, ಮೋದಿ ಸರ್ಕಾರ 2 ಸಾವಿರ ರೂಪಾಯಿಯನ್ನು ಖಾತೆಗೆ ವರ್ಗಾಯಿಸಲಿದೆ. ಈ ಯೋಜನೆಯಲ್ಲಿ ಸರ್ಕಾರ 6 ಸಾವಿರ ರೂಪಾಯಿಯನ್ನು ಪ್ರತಿ ವರ್ಷ ರೈತರ ಖಾತೆಗೆ ವರ್ಗಾಯಿಸುತ್ತಿದೆ. ಇದನ್ನು ಹೆಚ್ಚು ಮಾಡಲಾಗುತ್ತೆ ಎಂಬ ಸುದ್ದಿಯಿತ್ತು. ಈ ವದಂತಿಯನ್ನು ಕೃಷಿ ಸಚಿವರು ತಳ್ಳಿ ಹಾಕಿದ್ದಾರೆ.