
ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ಮುನ್ನ ಸರ್ಕಾರ ರೈತರಿಗೆ ಮಹತ್ವದ ಕೊಡುಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದಿಂದ ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತವನ್ನು ವಾರ್ಷಿಕ 6,000 ರೂ.ನಿಂದ 8000 ರೂ.ಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ವಾರ್ಷಿಕ 60,000 ಕೋಟಿ ರೂಪಾಯಿ ಬಜೆಟ್ ನಿಗದಿ ಮಾಡಿದ್ದು, ಪ್ರತಿ ರೈತರಿಗೆ ವಾರ್ಷಿಕ 8000 ರೂ.ಗೆ ಹೆಚ್ಚಳ ಮಾಡಿದಲ್ಲಿ ಹೆಚ್ಚುವರಿಯಾಗಿ 20,000 ಕೋಟಿ ರೂ. ಬೇಕಾಗುತ್ತದೆ ಎಂದು ಹೇಳಲಾಗಿದೆ.