2021ರ ರೈತರ ದಿನದಂದು ಸೊನಾಲಿಕಾ ಟ್ರಾಕ್ಟರ್ಸ್ ತನ್ನ ಸುಧಾರಿತ ಟೈಗರ್ ಡಿಐ 75 4ಡಬ್ಲ್ಯೂಡಿ ಟ್ರಾಕ್ಟರ್ ಅನ್ನು ಸಿಆರ್‌ಡಿ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೇ ಟ್ರಾಕ್ಟರ್ ನ 65ಎಚ್‌ಪಿ ಅವತರಣಿಕೆಯನ್ನೂ ಸೊನಾಲಿಕಾ ಇದೇ ಅವಧಿಯಲ್ಲಿ ಬಿಡುಗಡೆ ಮಾಡಿದೆ.
65 ಎಚ್‌ಪಿ ಟ್ರಾಕ್ಟರ್‌ನ ನಿರ್ವಹಣಾ ವೆಚ್ಚದಲ್ಲಿ ಈ ಟ್ರಾಕ್ಟರ್ 75ಎಚ್‌ಪಿ ಶಕ್ತಿ ಉತ್ಪಾದನೆ ಮಾಡಬಲ್ಲದು ಎಂದು ಸೊನಾಲಿಕಾ ತಿಳಿಸಿದೆ.
ಹೊಸ ವರ್ಷದ ಸಂಭ್ರಮಾಚರಣೆ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’
ಎರಡೂ ಟ್ರಾಕ್ಟರ್‌ಗಳಲ್ಲಿ 12+12 ಶಟಲ್ ಟೆಕ್ ಟ್ರಾನ್ಸ್‌ಮಿಶನ್, 5ಜಿ ಹೈಡ್ರಾಲಿಕ್ ನಿಯಂತ್ರಣ ವ್ಯವಸ್ಥೆ ಮತ್ತು 4ಡಬ್ಲ್ಯೂ ಮತ್ತು 2ಡಬ್ಲ್ಯೂನಂಥ ತಂತ್ರಜ್ಞಾನಗಳು ಇವೆ. ನಾಲ್ಕೂ ದಿಕ್ಕುಗಳಿಗೆ ಅಡ್ಜಸ್ಟ್ ಮಾಡಬಲ್ಲ ಸೀಟನ್ನು ಹೊಂದಿರುವ ಈ ಟ್ರಾಕ್ಟರ್, ಕ್ಯಾನ್ ಆಧರಿತ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದು, ರೈತರಿಗೆ ಸುದೀರ್ಘಾವಧಿಗೆ ಕೆಲಸ ಮಾಡಲು ನೆರವಾಗುತ್ತದೆ.
2,200 ಕೆಜಿಗಳಷ್ಟು ತೂಕವನ್ನು ಸಲೀಸಾಗಿ ಎತ್ತಬಲ್ಲ ಈ ಟ್ರಾಕ್ಟರ್‌ಗಳ ಆರಂಭಿಕ ಬೆಲೆ 11 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.