ಮಾಜಿ ಕ್ರಿಕೆಟಿಗ ಹಾಗೂ ಮೂರು ಬಾರಿ ಸಂಸದರಾದ ಕೀರ್ತಿ ಆಜಾದ್ 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದ ಹಳೆ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಬಿಜೆಪಿ ನಾಯಕರನ್ನು ಹಳ್ಳಿಗಳಲ್ಲಿ ದಾಳಿ ಮಾಡಿ ಓಡಿಸಲಾಗುತ್ತಿದೆ ಎಂದು ತೋರುವ ಈ ವಿಡಿಯೋವನ್ನು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಸಮಯದಲ್ಲಿ ಹಂಚಿಕೊಂಡಿದ್ದಾರೆ.
ಶನಿವಾರ ಬೆಳಿಗ್ಗೆ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕೀರ್ತಿ ಆಜ಼ಾದ್, “ಟಿವಿಯಲ್ಲಿ ತೋರಿದಂತೆ ಹಳ್ಳಿಗಳಾದ್ಯಂತ ತಮ್ಮ ಮೇಲೆ ಬೂಟುಗಳನ್ನು ಎಸೆಯುತ್ತಿದ್ದರೆ, ಅವರು 300 ಸೀಟುಗಳನ್ನು ದಾಟಿ ಸಾಗುತ್ತಿದ್ದಾರೆ,” ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ತಮ್ಮ ಪಕ್ಷ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಈ ವೀಡಿಯೋ ಟ್ವಿಟರ್‌ನಲ್ಲಿ 150ಕ್ಕೂ ಹೆಚ್ಚು ಟ್ವೀಟ್‌ಗಳು ಮತ್ತು 600 ಲೈಕ್‌ಗಳೊಂದಿಗೆ ವ್ಯಾಪಕವಾಗಿ ಶೇರ್ ಆಗಿದೆ. ಅಸಲಿ ವಿಡಿಯೋ ಕಳೆದ ವರ್ಷದ ಏಪ್ರಿಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ರಾಜಕೀಯ ನಾಯಕನೊಬ್ಬನ ಮೇಲೆ ಸಿಟ್ಟಿಗೆದ್ದ ಗ್ರಾಮಸ್ಥರು ಆತನನ್ನು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ.
ಬಂಗಾಳಿ ಪತ್ರಿಕೆ ’ಸಂಗ್ಬಾದ್ ಪ್ರತಿದಿನ್’ ಏಪ್ರಿಲ್ 29, 2021ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, “ಬೋಲ್ಪುರ್‌ನ ಬಿಜೆಪಿ ಅಭ್ಯರ್ಥಿ ಅನಿರ್ಬನ್ ಗಂಗೂಲಿ ಅವರ ಬೆಂಗಾವಲು ಪಡೆಯ ಮೇಲೆ ಬಿರ್‌ಭಮ್‌ನ ಇಲಂಬಜಾರ್‌ನಲ್ಲಿ ದಾಳಿ ನಡೆಸಲಾಗಿದೆ,” ಎಂದು ತಿಳಿಸಿದೆ.