ಬೆಂಗಳೂರು: ಇತ್ತೀಚೆಗೆ ಸದಾಶಿವನಗರದ ಪಬ್ ನಲ್ಲಿ ನಟ, ನಿರೂಪಕ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ್ದ ಐದು ಮಂದಿ ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅನಿಲ್, ವಿಜಯ್, ಅಜಯ್ ಸೇರಿದಂತೆ ಐವರು ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 2 ರಂದು ತಡರಾತ್ರಿ ಪಬ್ ನಲ್ಲಿ ಗಲಾಟೆ ನಡೆದು ಕಿರಿಕ್ ಕೀರ್ತಿ ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆಯಲಾಗಿತ್ತು. ಹಲ್ಲೆಗೊಳಗಾದ ಕಕಿರಿಕ್ ಕೀರ್ತಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು.