
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವಿಟರ್ ಮೂಲಕ ತಮ್ಮ ತವರು ರಾಜ್ಯ ಅರುಣಾಚಲ ಪ್ರದೇಶದ ಸೌಂದರ್ಯದ ಪರಿಚಯ ಮಾಡಿಕೊಡುತ್ತಿರುತ್ತಾರೆ.
ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ರಸ್ತೆಯೊಂದರಲ್ಲಿ ಸಿಲುಕಿದ ಕಾರೊಂದನ್ನು ಹೊರಗೆಳೆಯಲು ಸಹಾಯ ಮಾಡುತ್ತಿರುವ ತಮ್ಮದೇ ವಿಡಿಯೋವೊಂದನ್ನು ಕೆಲ ದಿನಗಳ ಹಿಂದೆ ರಿಜಿಜು ಹಂಚಿಕೊಂಡಿದ್ದರು. ಇದೇ ವೇಳೆ ಆ ಪ್ರದೇಶದಲ್ಲಿ ಸಂಚರಿಸುವ ಮಂದಿಗೆ ಎಚ್ಚರಿಕೆಯಿಂದಿರಲು ಸೂಚಿಸಿದ್ದರು ಸಚಿವರು.
BIG BREAKING: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತಂತೆ ಆಯೋಗದಿಂದ ಮಹತ್ವದ ಮಾಹಿತಿ
“ಅರುಣಾಚಲ ಪ್ರದೇಶದ ತವಾಂಗ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಸಂದರ್ಭದ ಸಲಹೆ. ಬಾಯ್ಶಾಕಿ, ಸೇಲಾ ಪಾಸ್ ಮತ್ತು ನೌರಾನಂಗ್‌ನಲ್ಲಿ ಭಾರೀ ಹಿಮಪಾತವಾಗುತ್ತಿರುವುದು ವರದಿಯಾಗಿದೆ. ನೀವು ಅಲ್ಲಿಗೆ ಹೊರಡುವ ಮುನ್ನ ದಯವಿಟ್ಟು ಸೂಕ್ತ ಮಾಹಿತಿ ಪಡೆದುಕೊಳ್ಳಿ, ಏಕೆಂದರೆ ಇಲ್ಲಿನ ತಾಪಮಾನ -25 ಡಿಗ್ರಿಗೆ ಇಳಿಯುವ ಸಾಧ್ಯತೆ ಇರುವ ಕಾರಣ ಈ ರಸ್ತೆಯಲ್ಲಿ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ,” ಎಂದು ಕಿರಣ್ ರಿಜಿಜು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಚಿವರನ್ನು ಟ್ಯಾಗ್ ಮಾಡಿ, “ಆತ್ಮೀಯರೇ, ಅದೇನೇ ಆಗಲಿ, ನಾನು ಅರುಣಾಚಲಕ್ಕೆ ನನ್ನ ಟಿಕೆಟ್‌ಗಳನ್ನು ಬುಕ್ ಮಾಡಿದ್ದೇನೆ, ಯಾವುದೇ ನಿರ್ಬಂಧಗಳನ್ನು ಹೇರಬೇಡಿ. ಸತ್ತರೆ ಸಾಯುತ್ತೇನೆ ಆದರೆ ಪ್ರವಾಸ ರದ್ದು ಮಾಡುವುದಿಲ್ಲ,” ಎಂದು ಆಶಿಶ್ ಸಿಂಘ್ವಿ ಭಾರತೀಯ ಹೆಸರಿನ ಪ್ರವಾಸಿಗರೊಬ್ಬರು ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ರಿಜಿಜು ಹೀಗೆ ತಿಳಿಸಿದ್ದಾರೆ.