ಫ್ಯಾಷನ್ ಎಂಬುದು ಒಂದು ಹಂತಕ್ಕೆ ಮುಗಿಯುವುದಿಲ್ಲ. ಅದು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಲೇ ಇರುತ್ತವೆ. ಜನರು ಡಿಸೈನರ್ ಮೇಳಗಳಿಂದ ಪ್ರೇರಿತವಾದ ಬಟ್ಟೆಗಳೊಂದಿಗೆ ತಮ್ಮ ವಾರ್ಡ್ರೋಬ್ಗಳಲ್ಲಿ ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಸಂಗ್ರಹಿಸುತ್ತಾರೆ. ಆದಾಗ್ಯೂ, ಹಲವಾರು ರಾಜ್ಯಗಳ ಹಳ್ಳಿಗಳಲ್ಲಿ ಇನ್ನೂ ಪ್ರಚಲಿತದಲ್ಲಿರುವ ಸಂಸ್ಕೃತಿಯನ್ನು ನೋಡಿದರೆ, ಪಟ್ಟಣ, ನಗರ ಪ್ರದೇಶಗಳಲ್ಲಿರುವ ಫ್ಯಾಷನ್ಗೆ ಸೆಡ್ಡು ಹೊಡೆದಂತೆ ಇರುತ್ತದೆ.
ಕೆಲವು ಗ್ರಾಮಸ್ಥರು ತಮ್ಮ ಬಟ್ಟೆಗಳನ್ನು ಖುದ್ದು ಹೇಗೆ ತಯಾರಿಸುತ್ತಾರೆ ಎಂಬುದು ಅಷ್ಟೇ ಅಚ್ಚರಿಯಾಗುತ್ತದೆ. ಅಂಥದ್ದೇ ಒಂದು ಕುತೂಲಯದ ವಿಡಿಯೋವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಶೇರ್ ಮಾಡಿಕೊಂಡಿದ್ದಾರೆ.
ನಾಗಾಲ್ಯಾಂಡ್ ಗ್ರಾಮವೊಂದರಲ್ಲಿ ಮಹಿಳೆಯರ ವಿಡಿಯೋವನ್ನು ಟ್ವಿಟರ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಮಹಿಳೆಯರು ಹತ್ತಿ ನೂಲುವ ಮತ್ತು ಬಟ್ಟೆಗೆ ಎಳೆಗಳನ್ನು ನೇಯುತ್ತಿರುವುದನ್ನು ಕಾಣಬಹುದು. ಈ ಹಳ್ಳಿಗರು ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಇನ್ನೂ ಹೇಗೆ ಉಳಿಸಿಕೊಂಡಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
“ನಮ್ಮ ನಾಗಾ ಸಹೋದರಿಯರು ಮತ್ತು ಸಹೋದರರ ಬಗ್ಗೆ ಅತ್ಯಂತ ಹೆಮ್ಮೆ! ಎಂದು ಕಿರಣ್ ರಿಜಿಜು ಬರೆದುಕೊಂಡಿದ್ದಾರೆ.
https://twitter.com/RSBALAJI17/status/1619681856085200898?ref_src=twsrc%5Etfw%7Ctwcamp%5Etweetembed