
ಮರಗಳ ಕೊಂಬೆಗಳ ಮೇಲೆ ಸೋಮಾರಿಯಾಗಿ ಕುಳಿತಿರುವ ಸಿಂಹಿಣಿಗಳ ಗುಂಪನ್ನು ಒಳಗೊಂಡ ನಂಬಲಾಗದ ವೀಡಿಯೊವನ್ನು ರಿಜಿಜು ಹಂಚಿಕೊಂಡಿದ್ದಾರೆ. ನಂಬಲು ಕಷ್ಟಕರವಾದ ದೃಶ್ಯವು ಜನರನ್ನು ಬೆರಗುಗೊಳಿಸಿದೆ. ವಿಶ್ವ ವನ್ಯಜೀವಿ ದಿನದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು ಎಂದು ಈ ಫೋಟೋ ಶೇರ್ ಮಾಡಿ ರಿಜುಜು ಬರೆದಿದ್ದಾರೆ.
ವೀಡಿಯೊ 22.6k ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಟ್ವಿಟ್ಟರ್ ಬಳಕೆದಾರರು ವೀಡಿಯೊ ಎಷ್ಟು ಅನನ್ಯ ಮತ್ತು ಸುಂದರ ಎಂದು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಇಂಥ ಒಂದು ಅಪರೂಪದ ವಿಡಿಯೋ ಶೇರ್ ಮಾಡಿದ್ದಕ್ಕೆ ರಿಜಿಜು ಅವರಿಗೆ ಧನ್ಯವಾದಗಳ ಸುರಿಮಳೆಯಾಗುತ್ತಿದೆ. ಜೊತೆಗೆ ಇವು ಸಿಂಹಿಣಿಯಾಗಿರುವ ಹಿನ್ನೆಲೆಯಲ್ಲಿ ಪುರುಷರು ಸೋಮಾರಿ ಮಹಿಳೆಯರ ಬಗ್ಗೆ ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.