alex Certify BREAKING : ಬೆಳಗಾವಿಯಲ್ಲಿ ಘೋರ ಘಟನೆ ; ಪ್ರೀತಿಸಿ ಮದುವೆಯಾದ ‘ರೀಲ್ಸ್ ರಾಣಿ’ಯ ಪ್ರಾಣ ತೆಗೆದ ಪಾಪಿ ಗಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಳಗಾವಿಯಲ್ಲಿ ಘೋರ ಘಟನೆ ; ಪ್ರೀತಿಸಿ ಮದುವೆಯಾದ ‘ರೀಲ್ಸ್ ರಾಣಿ’ಯ ಪ್ರಾಣ ತೆಗೆದ ಪಾಪಿ ಗಂಡ..!

ಬೆಂಗಳೂರು : ಇನ್ ಸ್ಟಾಗ್ರಾಂ ನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯೋರ್ವಳನ್ನು ಯುವಕನೋರ್ವ ತನ್ನ ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ಯುವತಿಯ ಕಥೆ ಮುಗಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮಂಜುಳಾ ಅಲಿಯಾಸ್ ನಯನಾ (23) ಎಂಬ ಮಹಿಳೆ ಮೃತಪಟ್ಟಿದ್ದು, ಬೆಳಗಾವಿ ಹೊರವಲಯದ ಮಚ್ಚೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೋರೇಶ್ ಎಂಬ ಯುವಕ ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ.
ಇನ್ ಸ್ಟಾಗ್ರಾಂ ನಲ್ಲಿ ರೀಲ್ಸ್ ಮಾಡುತ್ತಿದ್ದ ಮಂಜುಳಾರನ್ನು ಬೋರೇಶ್ ಪ್ರೀತಿಸಿ ಮದುವೆಯಾಗಿದ್ದನು. ಪೋಷಕರ ವಿರೋಧದ ನಡುವೆ ಆಕೆ ಬೋರೇಶ್ ನನ್ನು ವರಿಸಿದ್ದಳು.

ಒಂದು ವರ್ಷ ಚೆನ್ನಾಗಿ ಜೀವನ ನಡೆಸಿದ ಗಂಡ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವರದಕ್ಷಿಣೆ ತರುವಂತೆ ಒತ್ತಾಯಿಸಿ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...