ಚಿಕ್ಕಬಳ್ಳಾಪುರ : ಕಿಡಿಗೇಡಿಯೊಬ್ಬ ವೈದ್ಯೆಯ ಅಶ್ಲೀಲ ಫೋಟೋ ಎಡಿಟ್ ಮಾಡಿ ಆಕೆಯ ತಂದೆಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಕಿರಾತಕನೊಬ್ಬ ಯುವ ವೈದ್ಯೆಯ ಫೋಟೋ ಎಡಿಟ್ ಮಾಡಿ ಅದನ್ನು ಆಕೆಯ ತಂದೆಗೆ ಹಾಗೂ ಸಂಬಂಧಿಕರಿಗೆ ವಾಟ್ಸಾಪ್ ಮೂಲಕ ಕಳುಹಿಸಿ ಹಣಕ್ಕಾಗಿ ಪೀಡಿಸಿದ್ದಾನೆ. ನೊಂದ ಯುವತಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿಂತಾಮಣಿಯ ವೈದ್ಯೆಗೆ ಕರೆ ಮಾಡಿದ ಕಿಡಿಗೇಡಿಯೊಬ್ಬ ನೀವು ಆನ್ ಲೈನ್ ನಲ್ಲಿ 5 ಸಾವಿರ ಸಾಲ ಪಡೆದಿದ್ದೀರಿ…ವಾಪಸ್ ಕಟ್ಟಬೇಕು ಎಂದು ಬೆದರಿಕೆಯೊಡ್ಡಿದ್ದಾನೆ. ಆದರೆ ಯುವತಿ ನಾನು ಸಾಲ ಪಡೆದಿಲ್ಲ, ಹಾಗಾಗಿ ಯಾವುದೇ ಹಣ ಕಟ್ಟಲ್ಲ ಎಂದು ವೈದ್ಯೆ ಹೇಳಿದ್ದರು. ನಂತರ ಕಿರಾತಕ ವಿಪರೀತ ಒತ್ತಡ ಹೇರಲು ಶುರು ಮಾಡಿದ್ದಾನೆ. ಬಳಿಕ ಯುವತಿ ತಂದೆ ಹಾಗೂ ಸಂಬಂಧಿಕರ ವಾಟ್ಸಾಪ್ ಗೆ ಯುವತಿಯ ಅಶ್ಲೀಲ ಫೋಟೋ ಎಡಿಟ್ ಮಾಡಿ ಕಳುಹಿಸಿದ್ದಾನೆ. ನೊಂದ ಯುವತಿ ಚಿಕ್ಕಬಳ್ಳಾಪುರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.