ಡ್ರಗ್ಸ್ ಬಳಕೆ ವಿಚಾರವಾಗಿ ಕಳೆದ ವಾರ ಎಸ್‌ಐಟಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಮತ್ತು ಇತರ ಐವರನ್ನು ಆರೋಪಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು.
ಕಳೆದ ವರ್ಷ ಅಕ್ಟೋಬರ್ 2 ರಂದು ಹಡಗು ಏರಲು ಮುಂಬೈನ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ಗೆ ಆಗಮಿಸಿದ ಅತಿಥಿಗಳನ್ನು ಎನ್‌ಸಿಬಿ ಪರಿಶೀಲಿಸಿದ ನಂತರ, ಶಾರುಕ್ ಪುತ್ರ ಸೇರಿ ಕೆಲವರನ್ನು ಬಂಧಿಸಿ ಏಜೆನ್ಸಿಯ ಕಚೇರಿಗೆ ಕರೆತರಲಾಗಿತ್ತು.
ಇದೇ ವೇಳೆ ಅವರೆಲ್ಲ ಬಂಧನದಲ್ಲಿರುವಾಗ, ಆರ್ಯನ್ ಹಾಗೂ ಗೋಸಾವಿ ಜೊತೆಗಿನ ಸೆಲ್ಫಿ ವೈರಲ್ ಆಗಿತ್ತು. ಗೋಸಾವಿ ಫೋನ್ ಹಿಡಿದಿರುವುದು ಮತ್ತು ಆರ್ಯನ್ ಅದರಲ್ಲಿ ಮಾತನಾಡುತ್ತಿರುವುದು ಸೇರಿದಂತೆ ಎರಡು ವಿಡಿಯೊಗಳನ್ನು ಸಹ ಆತನ ಬಂಧನದ ಗಂಟೆಗಳ ನಂತರ ಪ್ರಸಾರ ಮಾಡಲಾಗಿತ್ತು.
ಗೋಸಾವಿ ಎಸ್‌ಐಟಿಗೆ ನೀಡಿದ ಹೇಳಿಕೆಯಲ್ಲಿ “ಈ ಬಗ್ಗೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಏಕೆಂದರೆ ಎಲ್ಲೆಡೆ ಅವನ ವಿಡಿಯೊದಿಂದಾಗಿ ನಾನು ಈಗಾಗಲೇ ಶಿಲುಬೆಗೇರಿಸಲ್ಪಟ್ಟಿದ್ದೇನೆ. ಆರ್ಯನ್ ಖಾನ್ ಧ್ವನಿಯನ್ನು ಕೇಳಲು ಬಯಸಿದ ನನ್ನ ಸ್ನೇಹಿತನಿಗೆ ಕರೆ ಮಾಡಿದ್ದೆನಷ್ಟೆ. ಇದು ಸಾಮಾನ್ಯ ಕರೆ ಎಂದು ವಿವರಿಸಿದ್ದಾರೆ.
ಪುಣೆಯ ಯೆರವಾಡ ಸೆಂಟ್ರಲ್ ಜೈಲಿನಲ್ಲಿ ಕಳೆದ ತಿಂಗಳು ಎಸ್‌ಐಟಿ ಗೋಸಾವಿ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಅಲ್ಲಿ ರಾಜ್ಯ ಪೊಲೀಸರು ಆತನ ವಿರುದ್ಧ ದಾಖಲಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಆರ್ಯನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ಏಕೆ ಎಂಬುದಕ್ಕೆ ಗೋಸಾವಿಗೆ 36 ಪ್ರಶ್ನೆಗಳನ್ನು ಸಹ ಕೇಳಲಾಗಿತ್ತು.
ಆರ್ಯನ್ ಖಾನ್ ಸರ್ಚ್ ಮಾಡಿದಾಗ ಡ್ರಗ್ಸ್ ಸಿಕ್ಕಿರಲಿಲ್ಕ. ಆದರೆ, ಆತನ ಫೋನ್‌ನಲ್ಲಿ ಡ್ರಗ್ ಸಂಬಂಧಿತ ಚಾಟ್‌ಗಳು ಪತ್ತೆಯಾಗಿವೆ. ಆರ್ಯನ್ ಖಾನ್ ಒಬ್ಬ ಸೆಲೆಬ್ರಿಟಿಯಾಗಿದ್ದಾನೆ ಮತ್ತು ಅವನಿಂದ ಯಾವುದೇ ಡ್ರಗ್ ಪತ್ತೆಯಾಗಿಲ್ಲ ಎಂದು ನಾನು ಭಾವಿಸಿದೆವು. ಅವನ ಸುತ್ತಲೂ ಜನಸಂದಣಿ ತಪ್ಪಿಸಲು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡಲಾಯಿತು. ನನ್ನ ಸ್ನೇಹಿತರಿಗೆ ಆರ್ಯನ್ ತೋರಿಸಲು ಅವರೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡೆ ಎಂದು ಗೋಸಾವಿ ಎಸ್‌ಐಟಿಗೆ ತಿಳಿಸಿದ್ದಾನೆ.
ಆರ್ಯನ್ ಮತ್ತು ಇತರರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ, ಸೆಲ್ಫಿ ಸಾಮಾಜಿಕ ಮಾಧ್ಯಮದಲ್ಲಿ ರೌಂಡ್ ಮಾಡಲಾರಂಭಿಸಿತು. ಆರಂಭದಲ್ಲಿ, ಛಾಯಾಚಿತ್ರದಲ್ಲಿರುವ ವ್ಯಕ್ತಿ ಎನ್‌ಸಿಬಿ ಅಧಿಕಾರಿಯೇ ಎಂಬ ಚರ್ಚೆ ನಡೆದಿತ್ತು. ತನಿಖಾ ಏಜೆನ್ಸಿ ಇದನ್ನು ನಿರಾಕರಿಸಿತ್ತು. ಬಳಿಕ ಹಡಗಿನಲ್ಲಿ ಶೋಧ ಮತ್ತು ವಶಪಡಿಸಿಕೊಳ್ಳಲು ಗೋಸಾವಿಯನ್ನು ಸಾಕ್ಷಿಯಾಗಲು ಕರೆದಿದ್ದರು.
ಬಳಿಕ ಗೋಸಾವಿಯ ಬಗ್ಗೆ ಎನ್‌ಸಿಪಿಯ ಮುಖಂಡ, ಸಚಿವ ಸಚಿವ ನವಾಬ್ ಮಲಿಕ್ ಪ್ರಶ್ನೆ ಎತ್ತಿ, ಗೋಸಾವಿ ಕ್ರಿಮಿನಲ್ ರೆಕಾರ್ಡ್ ಹೊಂದಿದ್ದು, ಎನ್‌ಸಿಬಿ ಇಂತಹ ವ್ಯಕ್ತಿಗಳಿಗೆ ಪ್ರವೇಶವನ್ನು ಹೇಗೆ ಅನುಮತಿಸಿತು ಎಂದು ಕೇಳಿದ್ದರು.