
ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ‘ಫಿಯರ್ಲೆಸ್ ಗವರ್ನೆನ್ಸ್’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಸಿಖ್ ಸಮುದಾಯದ ಮೇಲೆ ಮಾಡಿದ ‘ಜೋಕ್’ ವಿವಾದವೆಬ್ಬಿಸಿದೆ.
ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, “ಮೊಘಲರು ಭಾರತವನ್ನು ಲೂಟಿ ಮಾಡುವಾಗ ಮತ್ತು ಮಹಿಳೆಯರನ್ನು ಅಪಹರಿಸುವಾಗ, ಸಿಖ್ಖರು ಅವರೊಂದಿಗೆ ಹೋರಾಡಿದರು, ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸಿದರು. ’12 ಗಂಟೆ’ ಮೊಘಲರ ಮೇಲೆ ದಾಳಿ ಮಾಡುವ ಸಮಯವಾಗಿತ್ತು, ಇದು ಇತಿಹಾಸವಾಗಿದೆ” ಎಂದಿದ್ದರು.
BIG NEWS: ರಾಜಭವನ ಚಲೋಗೆ ಮುಂದಾದ ಕಾಂಗ್ರೆಸ್; ಕೈ ನಾಯಕರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದ ಸಚಿವ ಸುಧಾಕರ್
ನಂತರ, ಟ್ವಿಟರ್‌ನಲ್ಲಿ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ ಅವರು “ಸಮುದಾಯದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ನಾನು ಬಾಬಾ ನಾನಕ್ ದೇವ್ ಜಿ ಅವರ ಭಕ್ತೆ. ನಾನು ಹೇಳಿದ್ದನ್ನು ತಪ್ಪಾಗಿ ಓದಬೇಡಿ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದರು.
ಆದರೆ, ಆಮ್ ಆದ್ಮಿ ಮುಖ್ಯ ವಕ್ತಾರ ಮಲ್ವಿಂದರ್ ಸಿಂಗ್ ಅವರು ಬೇಡಿ ಅವರ ಟ್ವೀಟ್‌ಗೆ ಟೀಕಿಸಿ, ಸಿಖ್ ಸಮುದಾಯದ ಭಾವನೆಗಳಿಗೆ ಅಗೌರವ ಮತ್ತು ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.