ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಅಲಭ್ಯರಾಗಿದ್ದಾರೆ. ಅವರು ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹಿಂದೆ ಸರಿದಿದ್ದು, ಭಾರತ ತಂಡ ಮುನ್ನಡೆಸುವ ಜವಾಬ್ದಾರಿ ಕನ್ನಡಿಗ ಕೆ.ಎಲ್. ರಾಹುಲ್ ಹೆಗಲಿಗೆ ಬಿದ್ದಿದೆ.
ಸದ್ಯ ಟಾಸ್ ಗೆದ್ದು ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಎರಡನೇ ಟೆಸ್ಟ್ ನಿಂದ ಹಿಂದೆ ಸರಿದಿದ್ದಕ್ಕೆ ಅವರ ಸ್ಥಾನದಲ್ಲಿ ಹನುಮ ವಿಹಾರಿ ಕಾಣಿಸಿಕೊಂಡಿದ್ದಾರೆ.
ಈ ಒಂದೇ ಬದಲಾವಣೆ ಭಾರತ ತಂಡದಲ್ಲಿ ನಡೆದಿದ್ದು, ಮೊದಲ ಟೆಸ್ಟ್ ನಲ್ಲಿ ಆಡಿದ್ದ ಉಳಿದವರೆಲ್ಲ ಎರಡನೇ ಟೆಸ್ಟ್ ನಲ್ಲಿಯೂ ಆಡುತ್ತಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ತಂಡದಲ್ಲಿ ಕ್ವಿಂಟನ್ ಡಿ ಕಾಕ್ ಅವರ ಸ್ಥಾನಕ್ಕೆ ಕಾರ್ಲ್ ವಾರೆನ್ ಹಾಗೂ ವೈನ್ ಮುಲ್ಡರ್ ಸ್ಥಾನಕ್ಕೆ ಡುವಾನ್ ಆಲಿವರ್ ಕಣಕ್ಕೆಇಳಿದಿದ್ದಾರೆ.
ಮೊದಲ ಟೆಸ್ಟ್ನ ನಂತರ ಡಿ ಕಾಕ್ ನಿವೃತ್ತಿ ಪಡೆದಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಬೇರೆಯವರಿಗೆ ಅವಕಾಶ ಸಿಕ್ಕಿದೆ. ವಾರೆನ್ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಇnfnu ಭಾರತ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಲು ಮುಂದಾಗಿದೆ. ಏಕೆಂದರೆ ಭಾರತ ತಂಡವು ಜೋಹಾನ್ಸ್ ಬರ್ಗ್ ಪಿಚ್ ನಲ್ಲಿ ಇದುವರೆಗೂ ಸೋಲು ಕಂಡಿಲ್ಲ. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1-0 ಮುನ್ನಡೆ ಸಾಧಿಸಿದೆ.