ನಟಿ, ಉದ್ಯಮಿ ಕಿಮ್ ಕಾರ್ಡಶಿಯಾನ್ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ಮೊದಲ ಬಾರಿ ಭಾರತಕ್ಕೆ ಬಂದ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಮದುವೆ ಫೋಟೋಗಳನ್ನು ಕಿಮ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಗಣೇಶ ವಿಗ್ರಹದ ಜೊತೆಗಿರುವ ಅವರ ಫೋಟೋ ಒಂದು ಬಳಕೆದಾರರ ಗಮನ ಸೆಳೆದಿದೆ. ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಿಮ್, ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ ಲೆಹೆಂಗಾ ಧರಿಸಿ ಮಿಂಚಿದ್ದರು. ವಜ್ರಾಭರಣವನ್ನು ಧರಿಸಿ ಫೋಟೋಕ್ಕೆ ಫೋಸ್ ನೀಡಿದ್ದ ಕಿಮ್, ಅಂಬಾನಿ ಮದುವೆಗೆ ವಜ್ರಗಳು ಮತ್ತು ಮುತ್ತುಗಳು ಎಂದು ಶೀರ್ಷಿಕೆ ಹಾಕಿದ್ದರು. ಅವರು, ಒಂದು ಫೋಟೋದಲ್ಲಿ ಗಣೇಶ ವಿಗ್ರಹದ ಹಿಂದೆ ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾರೆ. ವಿಗ್ರಹದ ಪ್ರಾಪ್ ಆಗಿ ಬಳಸಿಕೊಂಡಿದ್ದಾರೆ. ವಿಗ್ರಹದ ಮೇಲೆ ಕೈ ಇಟ್ಟು, ಅದ್ರ ಮೇಲೆ ತಮ್ಮ ಗಲ್ಲವನ್ನಿಟ್ಟಿದ್ದಾರೆ. ಕಿಮ್ ಈ ಫೋಟೋ ದೇಸಿ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಫೋಟೋ ವೇಗವಾಗಿ ವೈರಲ್ ಆಗಿದ್ದಲ್ಲದೆ, ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಕಿಮ್ ಯಾವುದೇ ಪ್ರತಿಕ್ರಿಯೆ ನೀಡದೆ ಆ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ಪಾಲ್ಗೊಳ್ಳಲು ಕಿಮ್ ತನ್ನ ಸಹೋದರಿ ಖ್ಲೋಯ್ ಕಾರ್ಡಶಿಯಾನ್ ಜೊತೆಗೆ ಭಾರತಕ್ಕೆ ಬಂದಿದ್ದರು.