ಉತ್ತರ ಕೊರಿಯಾ ಕುರಿತು ಹೊರಜಗತ್ತಿಗೆ ತಿಳಿಯುವುದು ತುಂಬಾ ಕಡಿಮೆ. ಇದಕ್ಕೆ ಕಾರಣ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ತನ್ನ ನಿಯಮಗಳನ್ನು ಯಾರಾದರೂ ಮೀರಿದರೆ ಅಂತವರು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ಅಥವಾ ಹತ್ತಿರದ ಸಂಬಂಧಿಕರಾಗಿರಲಿ ಅಂಥವರನ್ನು ಕಿಮ್ ಜಾಂಗ್ ಉನ್ ಹತ್ಯೆ ಮಾಡುತ್ತಾನೆ ಎಂದು ಹೇಳಲಾಗಿದೆ.
ಹೀಗಾಗಿ ಉತ್ತರ ಕೊರಿಯಾದಲ್ಲಿ ಯಾರು ಇರುತ್ತಾರೆ, ಯಾರು ಇಲ್ಲ ಎಂಬುದು ಒಂದಷ್ಟು ಗೊಂದಲಗಳಿಗೆ ಕಾರಣವಾಗುತ್ತದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪತ್ನಿ ರಿ ಸೊಲ್ ಜೂ ಕಳೆದ 5 ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಸೆಪ್ಟೆಂಬರ್ 9ರಂದು ಕಿಮ್ ಜಾಂಗ್-ಉನ್ ಅವರ ತಂದೆ ಸಮಾಧಿ ಬಳಿ ರಿ ಸೊಲ್ ಜೂ ಕೊನೆಯದಾಗಿ ಕಾಣಿಸಿಕೊಂಡಿದ್ದು ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
ಜೀವನ ಪ್ರಮಾಣ ಪತ್ರಗಳ ಬಯೊಮೆಟ್ರಿಕ್ ಪ್ರಮಾಣೀಕರಣ ಮಾಡುವ ಕುರಿತು ಇಲ್ಲಿದೆ ವಿವರ
ಇದೀಗ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, 5 ತಿಂಗಳ ಬಳಿಕ ಕಿಮ್ ಜಾಂಗ್ ಉನ್ ಅವರ ಪತ್ನಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ರಂಗಮಂದಿರದಲ್ಲಿ ಪ್ರದರ್ಶನವೊಂದರ ವೀಕ್ಷಣೆಗೆ ತೆರಳಿ ವಾಪಸಾಗುತ್ತಿದ್ದ ವೇಳೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅವರೊಂದಿಗೆ ಕಿಮ್ ಅವರ ಅತ್ತೆ ಕಿಮ್ ಕೈಯಾಂಗ್ ಹುಯಿ ಕೂಡ ಇದ್ದರು ಎಂದು ಹೇಳಲಾಗಿದೆ.