ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವನ್ ಕಲ್ಯಾಣ್ ನಮ್ಮ ದೂರದ ಸಂಬಂಧಿಯಾಗಿದ್ದಾನೆ ಎಂದು ಹತ್ಯೆಯಾದ ವಿದ್ಯಾರ್ಥಿನಿ ಲಯಸ್ಮಿತಾ ತಾಯಿ ರಾಜೇಶ್ವರಿ ಹೇಳಿದ್ದಾರೆ.
ಈ ಹಿಂದೆಯೂ ಮಗಳು ಲಯಸ್ಮಿತಾಗೆ ಟಾರ್ಚರ್ ಮಾಡಿದ್ದ. ಹೀಗಾಗಿ ಪವನ್ ಕಲ್ಯಾಣ್ ನಂಬರ್ ಬ್ಲಾಕ್ ಮಾಡಿದ್ದಳು. ಮದುವೆಯಾಗುವಂತೆ ಪವನ್ ಕಲ್ಯಾಣ್ ಪದೇ ಪದೇ ಪೀಡಿಸುತ್ತಿದ್ದ. ಆತನ ಕಿರುಕುಳದ ಬಗ್ಗೆ ನಮ್ಮ ಬಳಿ ಹೇಳಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ಹೊಸ ವರ್ಷಾಚರಣೆಗೆ ಕೆಆರ್ ಪುರಂನಲ್ಲಿರುವ ಅಕ್ಕನ ಮನೆಗೆ ಲಯಸ್ಮಿತಾ ಹೋಗಿದ್ದಳು. ಇಂದು ಬೆಳಗ್ಗೆ ಕೆಆರ್ ಪುರಂನಿಂದಲೇ ಕಾಲೇಜಿಗೆ ತೆರಳಿದ್ದಾಳೆ. ಕಾಲೇಜಿನವರ ನಿರ್ಲಕ್ಷದಿಂದ ಕೊಲೆಯಾಗಿದೆ ಎಂದು ಪ್ರೆಸಿಡೆನ್ಸಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ರಾಜೇಶ್ವರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.